ಮಂಜೇಶ್ವರ: ಮೀಯಪದವಿನ ಶ್ರೀ ಅಯ್ಯಪ್ಪ ಸೇವಾಸಂಘದ ಆಶ್ರಯದಲ್ಲಿ 40ನೇ ವರ್ಷದ ಅಯ್ಯಪ್ಪ ದೀಪೋತ್ಸವವು ಡಿ. 27 ರಂದು ಶುಕ್ರವಾರ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 5.30ಕ್ಕೆ ಗಣಹೋಮ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನಾ ಸೇವೆ, 12.ಕ್ಕೆ ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ 8ರಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೀಯಪದವು ಭಜನಾಮಂದಿರದ ವರೆಗೆ ದೇವರ ಮೆರವಣಿಗೆ, ರಾತ್ರಿ 11ಕ್ಕೆ ತಾಯಂಬಕ ನಡೆಯಲಿದೆ. ಡಿ. 28ರಂದು ಮುಂಜಾನೆ 4ಕ್ಕೆ ಪೂಜೆ, ಅಗ್ನಿಪ್ರವೇಶ, ಪ್ರಸಾದವಿತರಣೆ ಜರಗಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 11ರಿಂದ ಭಗತ್ ಪ್ರೆಂಡ್ಸ್ ಬಾನಬೆಟ್ಟು ಮುನ್ನಿಪ್ಪಾಡಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಆರ್ಯಭಟ ಪ್ರಶಸ್ತಿಪುರಸ್ಕøತ ಪುತ್ತೂರು ಜಗದೀಶ ಆಚಾರ್ಯ ಹಾಗೂ ಬಳಗದವರಿಂದ ಸಂಗೀತ ಗಾನ ವೈಭವ, ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಕಾರ್ಯಕ್ರಮ ಜರಗಲಿದೆ.
ರಾತ್ರಿ 9.30ರಿಂದ ಸಭಾಕಾರ್ಯಕ್ರಮ ಜರಗಲಿದ್ದು ಮೀಯಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್ ಆರ್ ಎಂ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಭಾಗವಹಿಸುವರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಧಾರ್ಮಿಕ ಭಾಷಣ ನೀಡುವರು. ಅತಿಥಿಗಳಾಗಿ ವಿವಿಧ ಕ್ಷೇತ್ರಗಳ ಗಣ್ಯರಾದ ಪಿ.ಆರ್.ಶೆಟ್ಟಿ ಕುಳೂರು, ನ್ಯಾಯವಾದಿ ನವೀನ್ ರಾಜ್, ರಾಮಚಂದ್ರ ಗಟ್ಟಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪದ್ಮನಾಭ ರೈ ಉಂಬುಲ್ತೋಡಿ, ರಾಜ ಬರೆಮನೆ, ಸುಬ್ಬಣ್ಣ ಭಟ್ ಬಾನಬೆಟ್ಟು, ಭಾಗವಹಿಸುವರು. ಸಭೆಯಲ್ಲಿ ನಿವೃತ್ತ ಮುಖ್ಯೋಪಧ್ಯಾಯ ಶಂಕರನಾರಾಯಣ ಭಟ್ ಕುಡಿಯಮೂಲೆ ಹಾಗೂ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದೈಗೋಳಿ ಇದರ ಆಡಳಿತ ಟ್ರಸ್ಟಿ ಡಾ.ಉದಯಕುಮಾರ್ ಇವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಗುವುದು.

