ಕಾಸರಗೋಡು: ಜಿಲ್ಲಾ ಮಟ್ಟದ ಬೀಚ್ ಗೇಮ್ಸ್ ಇಂದು(ಡಿ.24) ಆರಂಭಗೊಳ್ಳಲಿದ್ದು, ಈ ಸಂಬಂಧ ವರ್ಣರಂಜಿತ ಮೆರವಣಿಗೆ ನಡೆಯಿತು. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಮೆರವಣಿಗೆ ಆರಂಭಗೊಂಡಿತು. ಕುತ್ತಿಕೋಲು ಸ್ತ್ರೀ ಶಕ್ತಿ ಮಹಿಳಾ ವಾದ್ಯಕಲಾ ಶಿಂಗಾರಿ ಮೇಳ ಇವರ ಚೆಂಡೆಮೇಳ ಸಹಿತ ಮೆರವಣಿಗೆ ಆಕರ್ಷಣೆ ಪಡೆದಿದೆ. ಮಂಜೇಶ್ವರ, ಕುಂಬಳೆ, ಕಾಸರಗೋಡು ಹೊಸಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಬೇಕಲ,ಪಳ್ಳಿಕ್ಕರೆ, ಕಾಞಂಗಾಡ್,ನೀಲೇಶ್ವರ, ಚೆರುವತ್ತೂರು ಪ್ರದೇಶಗಳ ಸಾರ್ವಜನಿಕ ಪ್ರದೇಶಗಳಲ್ಲಿ ಮೆರವಣಿಗೆ ಪರ್ಯಟನೆ ನಡೆಸಿತು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೆರವಣಿಗೆಗೆ ಹಸುರು ನಿಶಾನೆ ತೋರಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್, ಕಾರ್ಯದರ್ಶಿಇ.ನಜೀಮುದ್ದೀನ್, ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣನ್ ಪಳ್ಳಂ, ಮೈದಾನ ಸಮಿತಿ ಅಧ್ಯಕ್ಷ ಸುರೇಶ್ ಕುದಿರಕ್ಕೋಡು, ಪ್ರಚಾರ ಸಮಿತಿ ಸಂಚಾಲಕ ಟಿ.ವಿ.ಮುರಳೀಧರನ್, ಎ.ಡಿ.ಎಂ.ಸಿ. ಟಿ.ಸುರೇಂದ್ರನ್ ಉಪಸ್ಥಿತರಿದ್ದರು.


