ಕಾಸರಗೋಡು: ಪತ್ರ ಬರೆಯುವ ಸ್ಪರ್ಧೆ 2020 ಜ.1ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಲಿದೆ. ರಾಷ್ಟ್ರೀಯ ಮತದಾನ ಹಕ್ಕು ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ, ಅಂಗೀಕೃತ ಖಾಸಗಿ ಶಾಲೆಗಳ 8ನೇ ತರಗತಿ ಯಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಈ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಪ್ರಥಮ, ದ್ವಿತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಲಿದ್ದು, 2020 ಜ.25ರಂದು ನಡೆಯುವ ಮತದಾನ ಹಕ್ಕು ದಿನಾಚರಣೆಯಂದು ಪ್ರದಾನ ಮಾಡಲಾಗುವುದು. ಜಿಲ್ಲಾ ಮಟ್ಟದ ವಿಜೇತರು ತಿರುವನಂತಪುರಂನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಆಸಕ್ತ ಮಕ್ಕಳ ಕುರಿತು ಆಯಾ ಶಾಲೆಗಳ ಮುಖ್ಯಶಿಕ್ಷಕರು ಡಿ.28ರ ಮುಂಚಿತವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣೆ ವಿಭಾಗಕ್ಕೆ ಮಾಹಿತಿ ನೀಡಬೇಕು. ಈ-ಮೇಲ್ ವಿಳಾಸ: ದೂರವಾಣಿ ಸಂಖ್ಯೆ: 04994-255050, 6238796148.
ಜ.1ರಂದು ಪತ್ರಬರೆಯುವ ಸ್ಪರ್ಧೆ
0
ಡಿಸೆಂಬರ್ 24, 2019