ಮಂಜೇಶ್ವರ: ಪೌರತ್ವ ಕಾಯ್ದೆಯ ವಿರುದ್ದ ಗುರುವಾರ ಮಂಗಳೂರಲ್ಲಿ ಉಂಟಾದ ಗಲಭೆಯ ಮುಂದುವರಿಕೆಯಾಗಿ ಅಂತರ್ ರಾಜ್ಯ ಗಡಿಯನ್ನು ದಾಟಿ ಕೇರಳ ಪ್ರವೇಶಿಸಿದ್ದು, ಕೇರಳ ರಸ್ತೆ ಸಾರಿಗೆ ಬಸ್ ವೊಂದಕ್ಕೆ ರಾತ್ರಿ ಕಲ್ಲೆಸೆತ ಉಂಟಾಗಿದೆ.
ಮಂಗಳೂರಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ಕೇರಳ ಸಾರಿಗೆ ಬಸ್ ಗೆ ಹೊಸಂಗಡಿ ಉಪ್ಪಳ ಮಧ್ಯೆ ಕಲ್ಲೆಸೆತ ನಡೆಸಲಾಗಿದ್ದು, ಬಸ್ ಚಾಲಕ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ನಗರದಲ್ಲೂ ಸಂಜೆ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಮೆರವಣಿಗೆ ನಡೆಸಿದರು. ಸಂಘರ್ಷ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೋಲೀಸ್ ಸುರಕ್ಷೆ ಬಿಗಿಗೊಳಿಸಲಾಗಿದ್ದು, ನಿಷೇದಾಜ್ಞೆ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.


