ನವದೆಹಲಿ: ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಕೇಸಿನ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಗೆ ಗಲ್ಲುಶಿಕ್ಷೆ ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಹತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಕ್ಷಯ್ ಕುಮಾರ್ ಸಿಂಗ್ ಗಲ್ಲುಶಿಕ್ಷೆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದೆ. ನ್ಯಾಯಮೂರ್ತಿ ಆರ್ ಭಾನುಮತಿ ಅವರ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಅಕ್ಷಯ್ ಕುಮಾರ್ ಸಿಂಗ್ ಪರ ವಕೀಲ ಎ ಪಿ ಸಿಂಗ್ ಮತ್ತು ದೆಹಲಿ ಪೆÇಲೀಸರ ಪರವಾಗಿ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರ ವಾದ-ವಿವಾದವನ್ನು ಸುಮಾರು 30 ನಿಮಿಷಗಳ ಕಾಲ ಆಲಿಸಿ ತೀರ್ಪು ಪ್ರಕಟಿಸಿದೆ. 2017ರಲ್ಲಿ ನೀಡಲಾಗಿದ್ದ ಗಲ್ಲು ಶಿಕ್ಷೆ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬರದ ಹಿನ್ನಲೆಯಲ್ಲಿ ಇದನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿತು. ಇದಕ್ಕೂ ಮುuಟಿಜeಜಿiಟಿeಜನ್ನ ವಾದ ಮಂಡಿಸಿದ್ದ ಅಕ್ಷಯ್ ಕುಮಾರ್ ಸಿಂಗ್ ಪರ ವಕೀಲ ನಿರ್ಭಯಾ ಹತ್ಯಾಚಾರ ಕೇಸಿನ ಒಬ್ಬನೇ ಒಬ್ಬ ಸಾಕ್ಷಿಗೆ ಲಂಚ ನೀಡಲಾಗಿತ್ತು, ಇನ್ನು ತಿಹಾರ್ ಜೈಲಿನಲ್ಲಿ ಮೃತಪಟ್ಟ ರಾಮ್ ಸಿಂಗ್ ಸಾವು ಸಂಶಯಾಸ್ಪದವಾಗಿದೆ, ಇನ್ನು ತಮ್ಮ ಕಕ್ಷಿದಾರ ಅಕ್ಷಯ್ ಕುಮಾರ್ ಸಿಂಗ್ ಬಡವನಾಗಿರುವುದರಿಂದ ಗಲ್ಲುಶಿಕ್ಷೆ ನೀಡಲಾಗಿದೆ ಎಂದು ವಾದಿಸಿದ್ದರು.ದೆಹಲಿ ಮತ್ತು ಸುತ್ತಮುತ್ತ ಭಾಗಗಳಲ್ಲಿ ವಾಯುಮಾಲಿನ್ಯ ಮಟ್ಟ ದಿನೇ ದಿನೇ ಹದಗೆಡುತ್ತಿದೆ. ಜನರ ಜೀವಿತಾವಧಿ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮರಣದಂಡನೆ ಶಿಕ್ಷೆಯೇಕೆ ಎಂದು ನ್ಯಾಯಪೀಠಕ್ಕೆ ನ್ಯಾಯವಾದಿ ಸಿಂಗ್ ಪ್ರಶ್ನಿಸಿದ್ದರು.ಅಲ್ಲದೆ ನಿರ್ಭಯಾ ಸಾಯುವುದಕ್ಕೆ ಮುನ್ನ ನೀಡಿದ್ದ ಹೇಳಿಕೆ ಮತ್ತು ಸಾಕ್ಷಿಗಳು ಸಂಶಯಾಸ್ಪದವಾಗಿದೆ. ಅದನ್ನು ಅವಲಂಬಿಸಿಕೊಂಡು ತೀರ್ಪು ನೀಡಲು ಸಾಧ್ಯವಾಗುವುದಿಲ್ಲ. ಕೇವಲ 21 ನಿಮಿಷಗಳಲ್ಲಿ 6 ಮಂದಿ ಯುವತಿ ಮೇಲೆ ಅತ್ಯಾಚಾರ ನಡೆಸಲು ಸಾಧ್ಯವೇ? ನ್ಯಾಯಾಲಯ ತಪ್ಪಿತಸ್ಥರು ಎಂದು ತೀರ್ಪು ನೀಡಿರುವವರಲ್ಲಿ ಯಾರ ಹೆಸರನ್ನು ಕೂಡ ನಿರ್ಭಯಾ ಹೇಳಿರಲಿಲ್ಲ. ಆರೋಪಿಗಳು ಕಬ್ಬಿಣದ ಸಲಕೆ ಬಳಸಿದ್ದರು ಎಂದು ಕೂಡ ದಾಖಲಿಸಿರಲಿಲ್ಲ ಎಂದು ವಾದ ಮಂಡಿಸಿ ತಿಹಾರ್ ಜೈಲಿನ ನಿವೃತ್ತ ಅಧಿಕಾರಿ ತೀರ್ಪಿನ್ನು ಉದಾಹರಣೆಯಾಗಿ ಕೊಟ್ಟರು.ಈ ವೇಳೆ ಪ್ರತಿವಾದ ಮಂಡಿಸಿದ ದೆಹಲಿ ಪೆÇಲೀಸರ ಪರ ವಕೀಲ ನ್ಯಾಯಮೂರ್ತಿ ಮೆಹ್ತಾ, ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡದೆ ಇಂತಹ ರಾಕ್ಷಸರ ಹುಟ್ಟುವಿಕೆಗೆ ಕಾರಣರಾದರೆ ದೇವರು ಕೂಡ ಕ್ಷಮಿಸುವುದಿಲ್ಲ, ಅವರಿಗೆ ಜೀವದಾನ ನೀಡಬಾರದು ಎಂದರು. ಈ ವೇಳೆ ನಿರ್ಭಯಾಳ ಪೆÇೀಷಕರು ಕೋರ್ಟ್ ನಲ್ಲಿ ಉಪಸ್ಥಿತರಿದ್ದರು.
2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ 23 ವರ್ಷದ ಯುವತಿ ನಿರ್ಭಯಾಳ ಮೇಲೆ ಆರು ಮಂದಿ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದಿದ್ದರು. ಇದಕ್ಕೆ ದೇಶಾದ್ಯಂತ ತೀವ್ರ ಪ್ರತಿಭಟನೆ, ಖಂಡನೆ ನಂತರದ ದಿನಗಳಲ್ಲಿ ವ್ಯಕ್ತವಾಗಿತ್ತು. ನಂತರ ನಿರ್ಭಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳು ಡಿಸೆಂಬರ್ 28ರಂದು ಮೃತಪಟ್ಟಿದ್ದಳು.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆಸಿದ ದೆಹಲಿಯ ವಿಶೇಷ ತ್ವರಿತ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಗಲ್ಲುಶಿಕ್ಷೆ ವಿಧಿಸಿತ್ತು. 2014ರಲ್ಲಿ ದೆಹಲಿ ಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಅತ್ಯಾಚಾರ ನಡೆದ ಸಮಯದಲ್ಲಿ ಒಬ್ಬ ಆರೋಪಿ ಬಾಲಾಪರಾಧಿಯಾಗಿದ್ದರಿಂದ ಆತನನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಯಿತು. ಮತ್ತೊಬ್ಬ ಆರೋಪಿ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಿನಲ್ಲಿ ಮೃತಪಟ್ಟಿದ್ದ. ತೀರ್ಪು ಪ್ರಕಟದ ಬಳಿಕ ಪ್ರತಿಕ್ರಿಯೆ ನೀಡಿದ ಅಕ್ಷಯ್ ಕುಮಾರ್ ಸಿಂಗ್ ಪರ ವಕೀಲ ಎ ಪಿ ಸಿಂಗ್, ರಾಷ್ಟ್ರಪತಿಗಳ ಮುಂದೆ ದಯಾ ಅರ್ಜಿ ಸಲ್ಲಿಸಲಿದ್ದು ಅರ್ಜಿ ಸಲ್ಲಿಕೆಗೆ ಮೂರು ವಾರಗಳ ಸಮಯಾವಕಾಶ ಕೋರಲಾಗುವುದು ಎಂದರು. ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ, ನ್ಯಾಯಾಲಯದ ತೀರ್ಪಿನಿಂದ ತೀವ್ರ ಸಂತಸಗೊಂಡಿದ್ದೇನೆ ಎಂದಿದ್ದಾರೆ.
Asha Devi, mother of 2012 Delhi gang-rape victim, to ANI on SC rejects review petition of convict Akshay: I am very happy. (file pic) twitter.com/ANI/status/120…




