ಕಾಸರಗೋಡು: ಅಖಿಲ ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ 2 ನೇ ತ್ರೈವಾರ್ಷಿಕ ಸಮ್ಮೇಳನ ಡಿ.28 ಮತ್ತು 29 ರಂದು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜರಗಲಿದೆ.
ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆಯಿಂದ 27 ಕಾರ್ಯಕರ್ತರು ಅಖಿಲ `Áರತ ಪೆನ್ಶನರ್ಸ್ ಮಹಾಸಂಘದ ಅಧ್ಯಕ್ಷ ಸಿ.ಎಚ್.ಸುರೇಶ್ ಅವರ ನೇತೃತ್ವದಲ್ಲಿ ಭಾಗವಹಿಸಲಿರುವರು.
ಡಿ.28 ರಂದು ನಡೆಯುವ ಸಮ್ಮೇಳನವನ್ನು ಹಿಮಾಚಲ ಪ್ರದೇಶದ ಆರೋಗ್ಯ ಸಚಿವ ವಿಪಿನ್ ಸಿಂಗ್ ತೋಮರ ಉದ್ಘಾಟಿಸುವರು. ಡಿ.29 ರಂದು ಸಮಾರೋಪ ಕಾರ್ಯಕ್ರಮವನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ್ ಠಾಕೂರ್ ಉದ್ಘಾಟಿಸುವರು. ಪಾಲಂಪುರ ಶರವಣ ಕುಮಾರ ಕೃಷಿ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ಜರಗುವ ಸಮ್ಮೇಳನದಲ್ಲಿ 22 ರಾಜ್ಯಗಳಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿರುವರು. ಪಿಂಚಣಿದಾರರ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

