ಉಪ್ಪಳ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಯೂನಿಯನ್ ಪೈವಳಿಕೆ ಘಟಕದ ಕುಟುಂಬ ಮೇಳ ಹಾಗೂ ಸನ್ಮಾನ ಸಮಾರಂಭ ಡಿ.23ರಂದು ಬಾಯಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದಲ್ಲಿ ಜರಗಲಿದೆ. ಅಂದು ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪೈವಳಿಕೆ ಘಟಕದ ಅಧ್ಯಕ್ಷ ಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಲಿರುವರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕುಂಞಂಬು ನಾಯರ್ ಮೇಳವನ್ನು ಉದ್ಘಾಟಿಸಲಿರುವರು. ಇದೇ ವೇಳೆ ಹಿರಿಯ ಪಿಂಚಣಿದಾರರಾದ ಯು.ಕೆ.ಶಂಕರ ಭಟ್ ಪೈವಳಿಕೆ, ಕೆ.ಶಿವರಾಮ ಶೆಟ್ಟಿ ಬಾಯಾರು, ದೇವಕಿ.ಪಿ.ಮಾನಬೈಲು, ಫೆಲಿಕ್ಸ್ ಡಿಸೋಜ ಕಯ್ಯಾರು, ಭೀಪಾತಿಮ ಸಾಹೇಬ್ ಬ್ಯಾರಿ ಪೆರ್ವಡಿ ಇವರನ್ನು ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಯು.ರವಿಚಂದ್ರ, ಶೀನಪ್ಪ ಪೂಜಾರಿ, ಟಿ.ಡಿ.ಸದಾಶಿವ ರಾವ್ ಲೀಲಾವತಿ.ಕೆ.ಬಿ ಉಪಸ್ಥಿತರಿದ್ದು ಶುಭ ಹಾರೈಸಲಿರುವರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

