ಕಾಸರಗೋಡು: ಜಿಲ್ಲೆಗೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವುಂಟಾಗಿರುವುದಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಲೆಕ್ಕಾಚಾರ ತಿಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ. 58ರಷ್ಟು ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿದೆ.
ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕಾಸರಗೋಡು ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ ದಾಖಲಿಸಿಕೊಂಡಿದೆ. ನೀಲೇಶ್ವರದ ಬೋಟ್ ಹೌಸ್, ಬೇಕಲ ಕೋಟೆ, ಬೇಕಲ ರೆಸಾರ್ಟ್, ರಾಣಿಪುರಂ, ಆನಂದಾಶ್ರಮ ಸಹಿತ ನಾನಾ ಪ್ರವಾಸಿ ಕೇಂದ್ರಗಳಿಗೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿದೆ. 2018ರ ಸೆಪ್ಟಂಬರ್ ವರೆಗೆ ಕಾಸರಗೋಡು ಜಿಲ್ಲೆಗೆ 2633ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರೆ, ಈ ಸಂಖ್ಯೆ 2019ರ ಸೆಪ್ಟಂಬರ್ ವೇಳೆಗೆ 4157ಕ್ಕೇರಿದೆ. ಬೇಕಲ ಆಸುಪಾಸು ತಾಜ್ ವಿವೆಂಟಾ, ಲಲಿತ್ ಮುಂತಾದ ನಕ್ಷತ್ರ ಹೋಟೆಲ್‍ಗಳು ಕಾಲಿರಿಸುತ್ತಿದ್ದಂತೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
ಸಹಕಾರಿಯಾದ "ಸ್ಮೈಲ್'ಯೋಜನೆ:
ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಜಿಲ್ಲೆಯಲ್ಲಿ ರೂಪುನೀಡಲಾಗಿರುವ"ಸ್ಮೈಲ್'ಯೋಜನೆ ವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ಹೆಚ್ಚು ಸಹಕಾರಿಯಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಉದ್ಯಮಶೀಲ ಅಭಿವೃದ್ಧಿ, ಉದ್ಯೋಗಾವಕಾಶ ವಿಪುಲೀಕರಿಸುವ ಯೋಜನೆ ಇದಾಗಿದೆ. ಬಿಆರ್‍ಡಿಸಿ ಜಾರಿಗೊಳಿಸಿರುವ ಈ ಯೋಜನೆ ಕನಿಷ್ಠ ಕಾಲಾವಧಿಯಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಯೋಜನೆಯನ್ವಯ 50ಕ್ಕೂ ಹೆಚ್ಚು ಮಂದಿ ನಡೆಸುವ 27 ಉದ್ಯಮಗಳು ಪ್ರಸಕ್ತ ಜಿಲ್ಲಯಲ್ಲಿ ಕಾರ್ಯಾಚರಿಸುತ್ತಿದೆ.
ಬೇಕಲ ಟೂರಿಸಂ ಡೆವೆಲಪ್‍ಮೆಂಟ್ ಕಾರ್ಪೋರೇಶನ್(ಬಿಆರ್‍ಡಿಸಿ)ಜಾರಿಗೊಳಿಸಿರುವ'ಸ್ಮೈಲ್'ಯೋಜನೆ ಜಿಲ್ಲೆಯ ಪ್ರವಾಸೋದ್ಯಮ ವಲಯದ ಉತ್ತೇಜನಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಬೃಹತ್ ಹೋಟೆಲ್‍ಗಳ ಬದಲಾಗಿ, ಎಕ್ಸ್‍ಪೀರಿಯೆನ್ಶಿಯಲ್ ಟೂರಿಸಂ ಆಧಾರವಾಗಿಟ್ಟುಕೊಂಡು"ಸ್ಮೈಲ್'ಉದ್ಯಮಿಗಳು ವ್ಯವಸ್ಥೆಗೊಳಿಸುವ ಗೃಹವಾತಾವರಣ, ಸ್ಥಳೀಯವಾಗಿ ಲಭಿಸುವ ಭೋಜನಗಳು ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವಂತೆ ಮಾಡುತ್ತಿದೆ. ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ಉದ್ಯಮಿಗಳು, ಬಂಡವಾಳಗಾರರು ಮುಂದೆಬರಬೇಕಾಗಿದೆ.
ಪಿ.ಕೆ ಮನ್ಸೂರ್, ಎಂಡಿ
ಬಿಆರ್‍ಡಿಸಿ, ಕಾಸರಗೋಡು
¥


