ಪೆರ್ಲ: ಬಣ್ಪುತ್ತಡ್ಕದ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ 33ನೇ ವಾರ್ಷಿಕೋತ್ಸವ ಇತ್ತೀಚೆಗೆ ಸಂಪನ್ನಗೊಂಡಿತು. ಬೆಳಗ್ಗೆ 8ಕ್ಕೆ ಶ್ರೀಸತ್ಯನಾರಾಯಣ ಪೂಜೆ, 1130ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶಾಸ್ತಾ ಮೂಸಿಕಲ್ಸ್ ಪೆರ್ಲ ಇವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ಜರುಗಿತು.12.30ಕ್ಕೆ ಮಹಾಪೂಜೆ ,ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 5ಕ್ಕೆ ತಾಯಂಬಕ, 6.30ಕ್ಕೆ ಬಣ್ಪುತ್ತಡ್ಕ ಶಾಲಾ ವಠಾರದಿಂದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ಉಲ್ಪೆ ಮೆರವಣಿಗೆ ನಡೆಯಿತು.
ವಿಶೇಷ ಆಕರ್ಷಣೆಯಾಗಿ ಯುವಿ ಗಯ್ಸ್ ಬಣ್ಪುತ್ತಡ್ಕ ಇವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನಗೊಂಡಿತು. ರಾತ್ರಿ 7ಕ್ಕೆ ಶ್ರೀಗಣೇಶ ಮಹಿಳಾ ಭಜನಾ ಸಂಘ ಬೆದ್ರಂಪಳ್ಳ ಇವರಿಂದ ಭಜನಾ ಸೇವೆ , ಶ್ರೀಅಯ್ಯಪ್ಪ ಸ್ವಾಮಿ ಭಜನಾ ಸಂಘ ಬಣ್ಪುತ್ತಡ್ಕ ಮತ್ತು ಅಯ್ಯಪ್ಪ ವ್ರತಾಧಾರಿಗಳಿಂದ ಭಜನೆ ,ಮಹಾಮಂಗಳಾರತಿ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ಬಳಿಕ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ ದ.ಕ ಇವರಿಂದ ರವಿಕುಮಾರ್ ಸುರತ್ಕಲ್ ವಿರಚಿತ "ನಾಗ ನಂದಿನಿ " ಎಂಬ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

