ಕುಂಬಳೆ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಆಶ್ರಯದಲ್ಲಿ ಮೊಗೇರ ಕೂಡುಕಟ್ಟ್ ಕಾರ್ಯಕ್ರಮವು ಅಡ್ಕ ಬಂದ್ಯೋಡಿನಲ್ಲಿರುವ ಪರಿಶಿಷ್ಟ ಜಾತಿ ಕಾಲನಿ ಸಭಾಂಗಣ, ಪಡ್ರೆ ಪರ್ಮಲೆ ವೇದಿಕೆಯಲ್ಲಿ ಸಂಪನ್ನಗೊಂಡಿತು.
ಸಮಾಜದ ಹಿರಿಯರಾದ ತುಕ್ರ ಬಂದ್ಯೋಡು ಉದ್ಘಾಟಿಸಿದರು. ಸಮುದಾಯ ಬಾಂಧವರಿಂದ ಭಜನ ಕಾರ್ಯಕ್ರಮದೊಂದಿಗೆ ಆರಂಭಗೊಂಡು ವಿವಿಧ ಸಾಂಸ್ಕøತಿಕ ತಂಡಗಳಿಂದ ನೃತ್ಯ, ಹಾಡು, ಸ್ವರ ಸಂಗಮ ಮ್ಯೂಸಿಕಲ್ ಪರಂಬಳ ಇವರ ಗಾನಾಸುಧಾ ಹಾಗೂ ಕಿರು ನಾಟಕ ಪ್ರದರ್ಶನಗೊಂಡಿತು.
ಅಪರಾಹ್ನ ಜರಗಿದ ಮೊಗೇರ ಕವಿ, ಕಾವ್ಯ, ಗಾಯನ, ಕುಂಚ ಕಾರ್ಯಕ್ರಮದಲ್ಲಿ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಡಾ. ಆಶಾಲತಾ ಸಿ.ಕೆ ಚೇವಾರು, ಪದ್ಮಾವತಿ ಏದಾರು, ರಿತೇಶ್ ಕಿರಣ್ ಕಾಟುಕುಕ್ಕೆ, ಸುಂದರ ಬಾರಡ್ಕ ಇವರ ಕಾವ್ಯಗಳ ಗಾಯನ ಹಾಗೂ ಕುಂಚ ಬಿಡಿಸುವ ಕಾರ್ಯಕ್ರಮ ಜರಗಿತು. ಗಾಯಕರಾಗಿ ವಸಂತ ಬಾರಡ್ಕ, ವಿಜಯಕುಮಾರ್ ಬಾರಡ್ಕ, ಸುಭಾಷಿಣಿ ಕನ್ನಟಿಪಾರೆ, ಸುಜಾತ ಕನಿಯಾಲ, ಭಾಗ್ಯಲಕ್ಷ್ಮೀ ಪೈವಳಿಕೆ ಧ್ವನಿಗೂಡಿಸಿದರು. ಮೋಹನದಾಸ್ ಕಿಳಿಂಗಾರು, ಉದಯಶಂಕರ ಕಿಳಿಂಗಾರು ಕುಂಚ ಕಲಾವಿದರಾಗಿ ಪಾಲ್ಗೊಂಡರು. ರಾಮ ಪಟ್ಟಾಜೆ ನಿರೂಪಿಸಿದರು.
ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಉದಯ ಸಾರಂಗ, ವಸಂತ ಅಜಕ್ಕೋಡು, ಸುನಂದ ಟೀಚರ್, ಆನಂದ ಬಂದ್ಯೋಡು, ಎಂ.ಪಿ.ರಾಮಪ್ಪ ಮಂಜೇಶ್ವರ, ಪದ್ಮನಾಭ ಚೇನೆಕ್ಕೋಡು, ಹರಿಶ್ಚಂದ್ರ ಪುತ್ತಿಗೆ, ಕೃಷ್ಣದಾಸ್ ಡಿ., ವಿನೋದ್ ಬೇಪು, ಸುಧಾಕರ ಬೆಳ್ಳಿಗೆ, ಸುಂದರ ಸುದೆಂಬಳ, ಚಂದಪ್ಪ ಕಕ್ವೆ, ನಿಟ್ಟೋಣಿ ಬಂದ್ಯೋಡು, ರವಿ ಕನಕಪ್ಪಾಡಿ, ಸುಂದರಿ ಮಾರ್ಪನಡ್ಕ, ಕೃಷ್ಣ ಡಿ., ರವಿಚಂದ್ರ ಕನ್ನಟಿಪಾರೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಪಾನಿನಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಶ್ವಿನ್ ರಾಜ್ ಬಿ.ಕೆ. ಇವರನ್ನು ಅಭಿನಂದಿಸಲಾಯಿತು. ವಿವಿಧ ವಲಯಗಳಲ್ಲಿ ಸಾಧನೆಗೈದ ಜಯ ರಾಮಪ್ಪ, ಅಂಗಾರ ಅಜಕ್ಕೋಡು, ರವಿ ಬೆಳ್ಳರ್ಮೆ ಅಲ್ಲದೆ ವಿವಿಧ ರೀತಿಯಲ್ಲಿ ಸಾಧನೆ ತೋರಿದ 7 ಮಂದಿಯನ್ನು ಸನ್ಮಾನಿಸಲಾಯಿತು. ಹರಿರಾಮ ಕುಳೂರು ಸ್ವಾಗತಿಸಿ, ಗೋಪಾಲ ಡಿ. ವಂದಿಸಿದರು. ರವಿಕಾಂತ ಕೇಸರಿ ಕಡಾರು ನಿರೂಪಿಸಿದರು.


