ಬದಿಯಡ್ಕ: ಎಸ್‍ಎಸ್‍ಎಫ್ ಕುಂಬ್ಡಾಜೆ ವಲಯ ಹಾಗೂ ಮದ್ರಸಾ ಆಡಳಿತ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ವಲಯ ಜಮ್ಮಿಯತ್ತುಲ್ ಮುಹಲ್ಲಿಮೀನ್ 20ನೇ ವಾರ್ಷಿಕ ಸಮ್ಮೇಳನ, ಪೌರತ್ವ ಸಂರಕ್ಷಣ ರ್ಯಾಲಿ ಸೋಮವಾರ ಬದಿಯಡ್ಕದಲ್ಲಿ ಜರಗಿತು. ಮೇಲಿನ ಪೇಟೆಯಿಂದ ಆರಂಭ ರ್ಯಾಲಿ ಬಸ್ ನಿಲ್ದಾಣದ ಸಮೀಪ ಬಹಿರಂಗ ಸಭೆಯೊಂದಿಗೆ ಸಮಾಪ್ತಿಗೊಂಡಿತು.