ಉಪ್ಪಳ: ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಜ. 8 ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರದ ಬಡಗು ವಲಯ ವಾಹನ ಪ್ರಚಾರ ಜಾಥಾ ಉದ್ಘಾಟನೆ ಉಪ್ಪಳದಲ್ಲಿ ಶುಕ್ರವಾರ ನಡೆಯಿತು.
ಕೋಡಿ ರಾಜೇಂದ್ರನ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಎಸ್‍ಟಿಯು ರಾಜ್ಯ ಸಮಿತಿ ಅಧ್ಯಕ್ಷ ಅಹಮ್ಮದ್ ಕುಟ್ಟಿ ಉಣ್ಣಿಕುಲಂ ಉದ್ಘಾಟಿಸಿ ಮಾತನಾಡಿದರು. ರಾಮಚಂದ್ರ ಮಂಜೇಶ್ವರ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕೆ ಸುರೇಂದ್ರನ್, ಕೆ. ದಿವಾಕರನ್, ವಿ.ಕೆ.ಸದಾನಂದನ್, ಕೆ.ಕೆ. ಅಶ್ರಫ್, ಕೆ.ಪಿ.ಮೊಹಮ್ಮದ್ ಅಶ್ರಫ್ ಮೊದಲಾದವರು ಭಾಗವಹಿಸಿದರು. ಬೇಬಿ ಶೆಟ್ಟಿ ಸ್ವಾಗತಿಸಿ, ಸುಬ್ಬಣ್ಣ ಆಳ್ವ ವಂದಿಸಿದರು.

