ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ 9 ವರ್ಷ ನಿರ್ದೇಶಕರಾಗಿಯೂ, 20 ವರ್ಷ ಅಧ್ಯಕ್ಷರಾಗಿಯೂ ನಿರಂತರ 29 ವರ್ಷ ಅಧಿಕಾರ ನಿರ್ವಹಿಸಿ ಆಡಳಿತ ಮಂಡಳಿಯಿಂದ ವಿರಮಿಸುತ್ತಿರುವ ಎಚ್. ಶಿವರಾಮ ಭಟ್‍ರವರಿಗೆ ಬ್ಯಾಂಕ್‍ನ ವತಿಯಿಂದ ಅಭಿನಂದನಾ ಸಮಾರಂಭ ಶನಿವಾರ ಜರಗಿತು.
ಬ್ಯಾಂಕಿನ ನೂತನ ಅಧ್ಯಕ್ಷ ಜಯಂತ ಪಾಟಾಳಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರಾದ ಮುರಳೀಧರನ್, ರಾಜಗೋಪಾಲನ್, ಕೇರಳ ಬ್ಯಾಂಕಿನ ಕಾಸರಗೋಡು ವಲಯ ಪ್ರಬಂಧಕ ಅನಿಲ್ ಕುಮಾರ್, ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ, ಸಹಕಾರಿ ಯೂನಿಟ್ ತನಿಖಾಧಿಕಾರಿ ಸುನಿಲ್ ಕುಮಾರ್, ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ, ಎಡನಾಡು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಎಸ್.ಶಂಕರನಾರಾಯಣ ರಾವ್ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಕೃಷ್ಣ ಭಟ್ ಎ. ಸ್ವಾಗತಿಸಿ, ಉಪಾಧ್ಯಕ್ಷ ಶ್ಯಾಮರಾಜ್ ವಂದಿಸಿದರು. ನಿರ್ದೇಶಕ ಎಚ್. ರಾಮ ಭಟ್ ನಿರೂಪಿಸಿದರು.


