ದೆಹಲಿ: ಗ್ರಾಹಕರಿಗೆ ಅತ್ಯಾಕರ್ಷಕ ವಾಯ್ಸ್ ಕಾಲ್ ಯೋಜನೆಗಳನ್ನು ನೀಡುವ ವಿಷಯದ್ಲಲಿ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಪೈಪೆÇೀಟಿ ನಡೆಯುತ್ತಿದೆ.
ವೊಡಾಫೆÇೀನ್ ಐಡಿಯಾ ಹಾಗೂ ಏರ್ ಟೆಲ್ ಸಂಸ್ಥೆಗಳು ಈಗಾಗಲೇ ಅನಿಯಮಿತ ಧ್ವನಿ ಕರೆಗಳ ಯೋಜನೆ (unlimited voice plan) ನ್ನು ಪ್ರಕಟಿಸಿವೆ. ಈ ಬೆನ್ನಲ್ಲೇ ಜಿಯೋ ಸಹ ತನ್ನ ಹಿಂದಿನ ಅತಿ ಜನಪ್ರಿಯ ಹಾಗೂ ಅತ್ಯಾಕರ್ಷಕ ಯೋಜನೆಯನ್ನು ಪ್ರಕಟಿಸಿದೆ. ಈ ಹಿಂದೆ ಇದ್ದ 149 ರೂಪಾಯಿ ಹಾಗೂ 98 ರೂಪಾಯಿಗಳ ಯೋಜನೆಯನ್ನು ಜಿಯೋ ಮರುಪರಿಚಯಿಸಿದೆ.
129 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 2 ಜಿಬಿ ಡೇಟಾ ಹಾಗೂ 1000 ನಿಮಿಷ ಟಾಕ್ ಟೈಮ್ ಸೌಲಭ್ಯ ಹೊಂದಿತ್ತು. 98 ರೂಪಾಯಿಗಳ ಪ್ಯಾಕ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಲಭ್ಯವಿರಲಿದ್ದು, ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದೆ. ಈ ಪ್ಲ್ಯಾನ್ ನಲ್ಲಿ 300 ಎಸ್ ಎಂಎಸ್ ಸೌಲಭ್ಯ ಕೂಡ ಇದೆ.
ಜಿಯೋ ನೆಟ್ ವರ್ಕ್ ನಿಂದ ಹೊರತಾಗಿರುವ ನೆಟ್ ವರ್ಕ್ ಗಳಿಗೆ ಕರೆ ಮಾಡುವುದಕ್ಕೆ ಟಾಪ್ ಅಪ್ ವೋಚರ್ ಪಡೆಯಬೇಕಾಗುತ್ತದೆ, ಜಿಯೋ ಮತ್ತು ಲ್ಯಾಂಡ್ ಲೈನ್ ಗಳಿಗೆ ಉಚಿತ ಕರೆ ಸೌಲಭ್ಯ ಇರಲಿದೆ. ಇನ್ನು 149 ರೂಪಾಯಿ ಪ್ಲ್ಯಾನ್ ನಲ್ಲಿ 24 ದಿನಗಳ ವ್ಯಾಲಿಡಿಟಿ ಲಭ್ಯವಿದ್ದು, 24 ಜಿಬಿ ಡೇಟಾ, ಜಿಯೋ ಹೊರತಾದ ನೆಟ್ ವರ್ಕ್ ಗಳಿಗೆ 300 ನಿಮಿಷ ಉಚಿತ ಕರೆ ಮಾಡಬಹುದಾಗಿದ್ದು, 100 ಎಸ್ ಎಂಎಸ್ ಸೌಲಭ್ಯವಿರಲಿದೆ.


