ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳದ ದಂಪತಿ ಮಾಡಿಸಿರುವ ಪ್ರೀ ವೆಡ್ಡಿಂಗ್ ಪೆÇೀಟೋ ಶೂಟ್ ವೈರಲ್ ಆಗಿದೆ.
ಪ್ರವಾಸಿ ತಾಣವಾಗಿರುವ ಪೊನ್ಮುಡಿ ಬೆಟ್ಟದ ಮುಂಭಾಗ 'ಪೌರತ್ವ ತಿದ್ದುಪಡಿ ಕಾಯ್ದೆ ಬೇಡ', 'ಎನ್ ಆರ್ ಸಿ ಬೇಡ' ಎಂಬ ಫಲಕಗಳನ್ನು ಹಿಡಿದು ಪೆÇೀಟೋಗೆ ಪೆÇೀಸ್ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಸೆಂಬರ್ 18 ರಂದು ಅರುಣ್ ಗೋಪಿ ಹಾಗೂ ಆಶಾ ಶೇಖರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಪೆÇೀಟೋಗಳನ್ನು ಹಂಚಿಕೊಂಡಿಕೊಂಡಿದ್ದರು. ಆ ಬಳಿಕ ಈ ಪೆÇೀಟೋಗಳು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಕಾರಾತ್ಮಕ ಮತ್ತು ಋಣಾತ್ಮಕ ಅಭಿಪ್ರಾಯಗಳು ಕೇಳಿಬರುತ್ತಿವೆ.
ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸ್ ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ.


