ಮಂಜೇಶ್ವರ : ಮೀಯಪದವು ಅಯ್ಯಪ್ಪ ಮಂದಿರದ ನವೀಕರಣ ಕಾರ್ಯವನ್ನು ಕೈಗೆತ್ತಿಗೊಂಡಿದ್ದು ಆ ಬಗೆಗಿನ ನವೀಕರಣ ಶಿಲಾನ್ಯಾಸ ಕಾರ್ಯಕ್ರಮ ಜನವರಿ 27 ರಂದು ಸೋಮವಾರ ಬೆಳಿಗ್ಗೆ 9.46ರಿಂದ ಜರಗಲಿದೆ.
ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಬ್ರಹ್ಮಶ್ರೀ ಗೋವಿಂದ ಭಟ್ ಪೊಳ್ಳಕಜೆ ದೀಪ ಪ್ರಜ್ವಲನೆಗೈಯ್ಯುವರು. ವೇದಮೂರ್ತಿ ರಾಮ ಭಟ್ ಬೋಳಂತಕೋಡಿ, ವಾಸ್ತು ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಉಪಸ್ಥಿತರಿರುವರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಸರ್ಕಾರದ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನವೀಕರಣಗೊಳ್ಳಲಿರುವ ಕಟ್ಟಡಕ್ಕೆ ಶಿಲಾನ್ಯಾಸ ನಿರ್ವಹಿಸುವರು. ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ಯುಎಇ ಎಕ್ಸೇಂಜ್ ನ ನಿವೃತ್ತ ಅಧಿಕಾರಿ ಸುಧೀರ್ ಕುಮಾರ್ ರೈ ಎಣ್ಮಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅತಿಥಿಗಳಾಗಿ ನಾಡಿನ ಗಣ್ಯರಾದ ನಾರಾಯಣ ಹೆಗ್ಡೆ ಕೋಡಿಬೈಲು, ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ, ಡಾ.ಶ್ರೀಧರ ಭಟ್ ಉಪ್ಪಳ, ರಾಧಾಕೃಷ್ಣ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ, ಕೃಷ್ಣಪ್ಪ ಪೂಜಾರಿ ದೇರಂಬಳ, ಚೇತನಾ ಎಂ, ಜಯರಾಮ ಬಲ್ಲಂಗುಡೇಲು, ಯಸ್ ಯನ್ ಕಡಂಬಾರ್, ಗೋಪಾಲ ಶೆಟ್ಟಿ ಅರಿಬೈಲು, ಬಾಲಕೃಷ್ಣ ದೀಕ್ಷಾ ಉಪಸ್ಥಿತರಿರುವರು. ರಂಜಿತ್ ಪಿ ದುರ್ಗಾ ಶ್ರೀ ನಿಲಯ ಹೊಸಕಟ್ಟೆ ಉಪಸ್ಥಿತರಿರುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.


