HEALTH TIPS

ಕಲ್ಲುಗದ್ದೆ ಕ್ಷೇತ್ರ ಸಂಪರ್ಕ ರಸ್ತೆ ಉದ್ಘಾಟನೆ


      ಬದಿಯಡ್ಕ: ಕಲ್ಲುಗದ್ದೆ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಧರ್ಮ ಕಾರ್ಯಗಳಲ್ಲಿ ಊರಿನ ಎಲ್ಲಾ ಜನರು ಜಾತಿ ಮತ ಧರ್ಮ ಬೇಧವಿಲ್ಲದೆ ಒಟ್ಟುಗೂಡುವುದರಿಂದ ಸಮಾಜದಲ್ಲಿ ಸಮೃದ್ಧಿಯ ಬೆಳಕು ಕಾಣಲು ಸಾಧ್ಯ. ದೇಶದಲ್ಲಿ ವರ್ತಮಾನದ ಬೆಳವಣಿಗೆಗಳಿಗೆ ಇದೊಂದು ಆದರ್ಶವಾಗಬಹುದೆಂದು ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಫರಿತಾ ಸಕೀರ್ ಅಹ್ಮದ್ ಅಭಿಪ್ರಾಯಪಟ್ಟರು.
     ಅವರು ಕರಿಂಗಪಳ್ಳ ಕಲ್ಲುಗದ್ದೆ ಕ್ಷೇತ್ರದ ನೂತನ ಡಾಮರೀಕರಿಸಿದ ರಸ್ತೆಯನ್ನು ಬುಧವಾರ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸರ್ಕಾರವು ಉತ್ತಮ ಜೀವನಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಜನರು ಈ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಚೆಂಗಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾಂತ ಕುಮಾರಿ ಟೀಚರ್ ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಳಿಯಾರು ಚೆಂಗಳ ಸೇರುವ ಈ ರಸ್ತೆಯನ್ನು ಜಿಲ್ಲಾ ಪಂಚಾಯತಿ ಯೋಜನೆಯ ಮುಖಾಂತರ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಡಾಮರೀಕರಿಸುವ ಕಾರ್ಯವನ್ನು ಪೂರ್ತಿಗೊಳಿಸಲಾಯಿತೆಂದು ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಂಚಾಲಕ ಶೆರೀಫ್ ಕೊಡವಂಜಿ ಯೋಜನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ತಿಳಿಸಿದರು.
       ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ಕಾರ್ಯಕರ್ತರಾದ ಬಿ.ಸಿ.ಕುಮಾರನ್, ಶಾಫಿ ಚೂರಿಪಳ್ಳ, ಕೆ.ಸಿ.ರಫೀಕ್, ಬಿ.ಎ.ಹಮೀದ್ ಹಾಜಿ, ಕೃಷ್ಣ ಚೇಡಿಕಲ್, ಹನೀಫ್ ಕರಿಂಗಪಳ್ಳ, ಬಿ.ಕೆ.ಮಾಧವನ್ ನಂಬ್ಯಾರ್, ಬಶೀರ್ ಪೈಕ, ಅಬ್ದುಲ್ಲ ಕುಂಞÂ ಮುಂಡಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಕಮಲಾಕ್ಷ ಕಲ್ಲುಗದ್ದೆ ಅಭಿನಂದಿಸಿದರು. ಕಲ್ಲುಗದ್ದೆ ಕ್ಷೇತ್ರ ಸಮಿತಿ ಗೌರವ ಅಧ್ಯಕ್ಷ ಭಾಸ್ಕರ ಕಲ್ಲುಗದ್ದೆ ಅವರು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಮುಳಿಯಾರು ಗ್ರಾಮ ಪಂಚಾಯತಿ ಸದಸ್ಯೆ ಅನೀಶಾ ಮನ್ಸೂರ್ ಮಲ್ಲತ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries