ಕಾಸರಗೋಡು: ಆಹಾರ ವಲಯದ ಸ್ಟಾರ್ಟ್ ಅಫ್ ಸಾಧ್ಯತೆಗಳು ಮತ್ತು ಸಂದಿಗ್ಧತೆಗಳು ಎಂಬ ವಿಷಯದಲ್ಲಿ "ಕಲ್ಪ ಗ್ರೀನ್ ಚಾಟ್" ಕಾರ್ಯಕ್ರಮ ಫೆ.1ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಸಿ.ಪಿ.ಸಿಆರ್.ಐ.ಯಲ್ಲಿ ನಡೆಯಲಿದೆ.
ಕೇಂದ್ರ-ರಾಜ್ಯ ಸರ್ಕಾರಗಳು ಆಹಾರ ವಲಯದ ಸ್ಟಾರ್ಟ್ ಅಪ್ ಗಳಿಗೆ ನೀಡುವ ತಾಂತ್ರಿಕ-ಆರ್ಥಿಕ ಸಹಾಯಗಳ ಕುರಿತು ಕಾಸರಗೋಡು ಸಿ.ಪಿ.ಸಿ.ಆರ್.ಐ. ಮತ್ತು ಕೇರಳ ಸಟಾರ್ಟ್ ಅಪ್ ಮಿಷನ್ ವತಿಯಿಂದ ಮಾಹಿತಿ ನೀಡಲಾಗುವುದು. ಕೇರಳ ಕೃಷಿ ವಿವಿ ಸಂಸೊಧನೆ ವಿಭಾಗ ಅಸೋಸಿಯೇಟ್ ನಿರ್ದೆಶಕ ಡಾ.ಕ.ಪಿ.ಸುಧೀರ್ ತರಗತಿ ನಡೆಸುವರು. ಬಾಗವಹಿಸುವವರಿಗೆ ಸಿ.ಪಿ.ಸಿ.ಆರ್.ಐ.ಅಗ್ರಿ ಇನ್ ಕ್ಯೂಬೇಷನ್ ಸೆಂಟರ್ ಸಂದರ್ಶನಕ್ಕೆ ಮತ್ತು ಮಾಹಿತಿ ಪಡೆಯುವ ಅವಕಾಶಗಳಿವೆ. ಮೊದಲು ನೋಂದಣಿ ನಡೆಸುವ 100 ಮಂದಿಗೆ ಪ್ರವೇಶಾತಿ ಲಭಿಸಲಿದೆ. ಮುಂಗಡ ಹೆಸರು ನೋಂದಣಿಗೆ ದೂರವಾಣಿ ಸಂಖ್ಯೆ: 8129182004.

