ಕಾಸರಗೋಡು: ಕಣ್ಣೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ ವತಿಯಿಂದ 'ದಶಕದ ಮಹಿಳಾ ಆತ್ಮಕತೆಗಳು'ರಾಷ್ಟ್ರೀಯ ವಿಚಾರ ಸಂಕಿರಣ ಜನವರಿ 24ರಂದು ಬೆಳಗ್ಗೆ 10ಕ್ಕೆ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ಸಭಾಂಗಣದಲ್ಲಿ ಜರುಗಲಿದೆ.
ಹಿರಿಯ ಪತ್ರಕರ್ತೆ, ಲೇಖಕಿ ಡಾ. ವಿಜಯಮ್ಮ ಸಮಾರಂಭ ಉದ್ಘಾಟಿಸುವರು. ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಯು.ಭಟ್ ಮಂಗಳೂರು ಅಧ್ಯಕ್ಷತೆ ವಹಿಸುವರು. ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಕಿ ಡಾ. ಯು.ಮಹೇಶ್ವರಿ, ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ. ರಆಜೇಶ್ ಬೆಜ್ಜಂಗಳ ಉಪಸ್ಥಿತರಿರುವರು.
ಈ ಸಂದರ್ಭ ನಡೆಯುವ ವಿಚಾರಗೋಷ್ಠಿಯಲ್ಲಿ ಡಾ. ಸಬಿತಾ ಬನ್ನಾಡಿ, ಹರ್ಷಕುಮಾರ್ ಕುಗ್ವೆ ಪ್ರಬಂಧ ಮಂಡಿಸುವರು. ಹಿರಿಯ ಲೇಖಕಿ ಪರಮೇಶ್ವರೀ ಲೋಕೇಶ್ ಅಧ್ಯಕ್ಷತೆ ವಹಿಸುವರು.ಎರಡನೇ ಗೋಷ್ಠಿಯಲ್ಲಿ ಅನಿಲ್ ವಿ.ಚೆರಿಯನ್, ಡಾ. ಶೈಲಜಾ, ವಿಚಾರ ಮಂಡಿಸುವರು. ಹಿರಿಯ ಲೇಖಕಿ ಬಿ.ಎಂ ರೋಹಿಣಿ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭದಲ್ಲಿ ಹಂಪಿ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಸುಬ್ಬಣ್ಣ ರೈ ಸಮಾರೋಪ ಭಾಷಣ ಮಾಡುವರು.ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಅಧ್ಯಕ್ಷತೆ ವಹಿಸುವರು.

