ಕಾಸರಗೋಡು: ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲೆಯ ರಾಷ್ಟ್ರೀಯ-ರಾಜ್ಯ-ಲೋಕೋಪಯೋಗಿ ಹೆದ್ದಾರಿ ಬದಿಯ ತ್ಯಾಜ್ಯ ತೆರವುಗೊಳಿಸುವ ಕಾರ್ಯ ಜ.25ರಂದು ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿನಡೆದ ಸಮಾಲೋಚನೆ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಬೆಳಗ್ಗೆ 8 ರಿಂದ 86.8 ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲೂ, 29 ಕಿಮೀ ಕೆ.ಎಸ್.ಟಿ.ಪಿ. ರಸ್ತೆಯಲ್ಲೂ, 16ಕಿಮೀ ರಾಜ್ಯ ಹೆದ್ದಾರಿಯಲ್ಲೂ ತೆರವುಗೊಳಿಸಲಾಗುವುದು. ವಿದ್ಯಾರ್ಥಿ ಪೆÇಲೀಸ್ ಕೆಡೆಟ್, ರಾಷ್ಟ್ರೀಯ ಸೇವಾ ಯೋಜನೆ ಸದಸ್ಯರು, ಕುಟುಂಬಶ್ರೀ ಕಾರ್ಯಕರ್ತರು, ಇನ್ನಿತರ ಸ್ವಯಂಸೇವಾ ಸಂಘನೆಗಳ ಕಾರ್ಯಕರ್ತರ ಸಹಕಾರದೊಂದಿಗೆ ಶುಚೀಕರಣ ಪ್ರಕ್ರಿಯೆ ನಡೆಯಲಿದೆ. ಶುಚೀಕರಣದಲ್ಲಿ ಭಾಗಿಗಳಾಗುವ ವ್ಯಕ್ತಿಗಳಿಗೆ ತಲಾ 40 ರೂ. ಲಘುಉಪಹಾರಕ್ಕಾಗಿ ಶುಚಿತ್ವ ಮಿಶನ್ ಮಂಜೂರುಮಾಡಲಿದೆ.
ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ ತಂದು ಸುರಿಯುವವರ ಪತ್ತೆಗೆ 110 ಸಿಸಿ ಕ್ಯಾಮರಾಗಳನ್ನು ಸ್ಥಾಪಿಸುವ ಸಂಬಂಧ ಕ್ರಮ ಜಾರಿಯಲ್ಲಿದೆ. ರಸ್ತೆಬದಿ ರಾಶಿ ಬಿದ್ದಿರುವ ತ್ಯಾಜ್ಯಗಳಲ್ಲಿ ಜೈವಿಕ ತ್ಯಾಜ್ಯವನ್ನು ಸ್ಥಳೀಯಪಂಚಾಯಿತಿಗಳು, ಅಜೈವಿಕ ತ್ಯಾಜ್ಯಗಳನ್ನು ಕ್ಲೀನ್ ಕೇರಳ ಕಂಪೆನಿಗಳು ತೆರವುಗೊಳಿಸುವ ಸಂಬಂಧ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಸಂಬಂಧ ಕುಟುಂಬಶ್ರೀ ಸಹಿತ ವಿವಿಧ ಸ್ವಯಂಸೇವಾ ಸಂಘನೆಗಳ ಕಾರ್ಯಕರ್ತರ ಸಭೆಜ.23ರಮುಂಚಿತವಾಗಿ ನಡೆಯಲಿದೆ. ಹೆದ್ದಾರಿ ಬದಿ ಶುಚೀಕರಣ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರತಿ ಪಂಚಾಯಿತಿ ಕಾರ್ಯದರ್ಶಿಗಳು ಫೆÇಟೋ ಸಹಿತ ವರದಿಗ¼ನ್ನುಜ.27ರಮುಂಚಿತವಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು.ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷರಾದ ಷಾಹಿನಾ ಸಲೀಂ, ಎ.ಎ.ಜಲೀಲ್, ಕೆ.ಎ.ಮಹಮ್ಮದಾಲಿ,ಪಿ.ದಾಮೋದರನ್,ಕಲ್ಲಟ್ರ ಅಬ್ದುಲ್ ಖಾದರ್, ಷಾಹುಲ್‍ಹಮೀದ್, ಪಿ.ಎ.ಯು.ಯೋಜನೆ ನಿರ್ದೇಶಕ ಕೆ.ಪ್ರದೀಪನ್, ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕ ಪಿ.ವಿ.ಜಸೀರ್,ಹಸಿರು ಕೆರಳ ಮಿಷನ್ ಎಂ.ಪಿ.ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು.

