ಕಾಸರಗೋಡು: ಕರಡು ಮತದಾತರ ಪಟ್ಟಿ ಸಂಬಂಧ ಯಾವುದೇ ಆಕ್ಷೇಪಗಳಿದ್ದಲ್ಲಿ ಫೆ.14ರ ಮುಂಚಿತವಾಗಿ ಸಲ್ಲಿಸಬೇಕು ಎಂಬುದಾಗಿ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಳಸಿದ ಮತದಾತರ ಪಟ್ಟಿಯಲ್ಲಿ ಹೆಸರು ಹೊದಿರುವವರ ಅರ್ಜಿಗಳನ್ನು ಕೇರಳ ಪಂಚಾಯಿತಿ ರಾಜ್ ಕಾಯಿದೆ, ನಗರಸಭೆ ಕಾಯಿದೆ ಪ್ರಕಾರ ಅರ್ಜಿಗಳನ್ನು ಯಾವುದೇ ಅಭ್ಯಂತರವಿಲ್ಲದೆ ಸ್ವೀಕರಿಸಲು ಸಭೆ ನಿರ್ಧರಿಸಿದೆ. ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸ ಬಯಸುವವರು ಫೆÇಟೋ, ಗುರುತುಚೀಟಿ, ಸಹಿತ ನೆರವಾಗಿ ಅಹವಾಲು ಸ್ವೀಕಾರ ಸಭೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕರಡು ಪಟ್ಟಿ ಸಂಬಂಧ ಹೆಸರು ಸೇರ್ಪಡೆ ಸಹಿತ ಕ್ರಮಗಳು ಫೆ.25ರ ಮುಂಚಿತವಾಗಿ ಪೂರ್ಣಗೊಳಿಸಿ, ಅಂತಿಮ ಪಟ್ಟಿ ಫೆ.28ರಂದು ಪ್ರಕಟಿಸಲಾಗುವುದು ಎಂದು ನುಡಿದರು.
ಸಭೆಯಲ್ಲಿ ಶಾಸಕ ಕೆ.ಕುಞÂರಾಮನ್, ಸಹಾಯಕಜಿಲ್ಲಾಧಿಕಾರಿ(ಚುನಾವಣೆ) ಎ.ಕೆ.ರಮೇಂದ್ರನ್, ಪಂಚಾಯಿತಿ ಸಹಾಯಕ ನಿರ್ದೇಶಕ ಪಿ.ಎಂ.ಧನೇಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

