HEALTH TIPS

ದಕ್ಷಿಣ ಭಾರತಕ್ಕೆ ಮೊದಲು: ತಂಜಾವೂರು ವಾಯುಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

   
     ತಂಜಾವೂರು: ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.
     ಬ್ರಹ್ಮೋಸ್ ಕ್ಷಿಪಣಿ ಒಳಗೊಂಡ ಸುಖೋಯ್-30 ಎಂಕೆಐ ಯುದ್ಧವಿಮಾನವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು. ಕೊಯಮತ್ತೂರಿನ ಸೂಲೂರ್ ವಾಯುಪಡೆ ನೆಲೆಗೆ ಮುನ್ನೆಲೆಯ ಯುದ್ಧವಿಮಾನ ಈಗಾಗಲೇ ಸೇರ್ಪಡೆಗೊಂಡಿದ್ದು, ಇಂದು ಸೇರ್ಪಡೆಯಾದ ಯುದ್ಧವಿಮಾನ ದಕ್ಷಿಣ ಭಾರತದ ಮುನ್ನೆಲೆಯ ಎರಡನೇ ಯುದ್ಧವಿಮಾನವಾಗಿದೆ. ತಂಜಾವೂರು, ದಕ್ಷಿಣ ವಾಯು ಕಮಾಂಡ್ ನ ಸುಖೋಯ್-30 ಯುದ್ಧವಿಮಾನವನ್ನು ಪಡೆದ ಮೊದಲ ಕೇಂದ್ರವೆನಿಸಿದೆ. 2013ರ ಮೇ 27ರಂದು ತಂಜಾವೂರು ವಾಯು ಪಡೆ ಕೇಂದ್ರವನ್ನು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ರಾಷ್ಟ್ರಕ್ಕೆ ಸಮರ್ಪಿಸಿದ್ದರು.
    ಹಿಂದೂ ಮಹಾಸಾಗರ ಪ್ರದೇಶದ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಆರ್ಥಿಕ ಹಿತಾಸಕ್ತಿ ಮತ್ತು ಆಸ್ತಿಗಳನ್ನು ರಕ್ಷಿಸುವುದಕ್ಕಾಗಿ ಈ ಕೇಂದ್ರ ಸ್ಥಾಪಿಸಲಾಗಿದೆ. ತಂಜಾವೂರು ಮತ್ತು ಕೊಯಮತ್ತೂರು ಕೇಂದ್ರಗಳ ಸ್ಥಾಪನೆಗಳಿಂದ ದಕ್ಷಿಣ ಭಾಗದಲ್ಲಿ ಭಾರತೀಯ ವಾಯುಪಡೆಯ ಕಾರ್ಯಾಚರಣೆ ಸಾಮಥ್ರ್ಯ ಗಣನೀಯವಾಗಿ ವೃದ್ಧಿಯಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries