HEALTH TIPS

ಸರ್ಕಾರ ಮತ್ತು ಉದ್ಯಮಗಳ ನಡುವೆ ವಿಶ್ವಾಸ ಕೊರತೆ ಕೊನೆಯಾಗಬೇಕು: ನಿರ್ಮಲಾ ಸೀತಾರಾಮನ್


     ಚೆನ್ನೈ: ಸರ್ಕಾರ ಮತ್ತು ಉದ್ಯಮಗಳ ನಡುವಿನ ವಿಶ್ವಾಸಾರ್ಹ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಎಲ್ಲಾ ವಿಧದಲ್ಲಿಯೂ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
   ಕಂಪೆನಿ ಕಾಯ್ದೆಯಡಿ ನಿರಪರಾಧೀಕರಿಸುವುದು ಮತ್ತು ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟಾಗಬೇಕೆಂಬ ಗುರಿ ತಲುಪಲು ಇಂಡಿಯಾ ಇಂಕ್ ನ ಬೆಂಬಲವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಮೊನ್ನೆ ಅವರು ಚೆನ್ನೈಯಲ್ಲಿ ನಾನಿ ಪಲ್ಕಿವಾಲಾ ಫೌಂಡೇಶನ್ ಏರ್ಪಡಿಸಿದ್ದ 5 ಟ್ರಿಲಿಯನ್ ಆರ್ಥಿಕತೆಗೆ ಭಾರತದ ನೀಲನಕ್ಷೆ ಎಂಬುದರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
   ಭಾರತದಲ್ಲಿ ಶೇಕಡಾ 60ರಷ್ಟು ಜಿಡಿಪಿ ಸೇವಾ ವಲಯದಿಂದ ಬರುತ್ತಿದ್ದು ಅದಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಕಡಿಮೆಯಾಗಿದೆ. ಎಲ್ಲಾ ಉದ್ಯಮಗಳನ್ನು ಸಂಶಯದಿಂದ ಸರ್ಕಾರ ನೋಡುವುದಿಲ್ಲ. ಅದು ನಮ್ಮ ಉದ್ದೇಶ ಕೂಡ ಅಲ್ಲ, ಕಂಪೆನಿ ಕಾಯ್ದೆ ಅಥವಾ ಇತರ ಸಂಬಂಧಪಟ್ಟ ಕಾನೂನುಗಳ ಮೂಲಕ ಪ್ರತಿಯೊಂದನ್ನೂ ನಿರಪರಾಧೀಕರಿಸುವುದು ಇಂದಿಗೂ ಕೂಡ ನಮ್ಮ ಆದ್ಯ ಪ್ರಯತ್ನವಾಗಿದೆ ಎಂದರು.
     ನಮಗೆ ಮೇಲ್ವಿಚಾರಣೆ ಮಾಡುವವರು ಬೇಕೆ ಹೊರತು ಎಲ್ಲವನ್ನೂ ಸಂಶಯದಿಂದ ನೋಡುವವರು ಆಗಿರಬಾರದು. ನಮ್ಮಲ್ಲಿರುವ ಕಾನೂನುಗಳೆಲ್ಲವೂ ಸಂಶಯದಿಂದಲೇ ನೋಡುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಚಿವೆ, ಸರ್ಕಾರ 16 ಕಾರ್ಯವಿಧಾನ ಅಪರಾಧಗಳನ್ನು ನಿರಪರಾಧೀಕರಣಗೊಳಿಸಿದ್ದು ಇದರಿಂದ ಜೈಲು ಶಿಕ್ಷೆಯಾಗುವುದಿಲ್ಲ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries