HEALTH TIPS

ಸಂವಿಧಾನ ಮೌಲ್ಯಗಳ ಅನುಷ್ಠಾನದಿಂದ ದೇಶ ಬಲಿಷ್ಠ : ಸಚಿವ ಇ.ಚಂದ್ರಶೇಖರನ್


       
         ಕಾಸರಗೋಡು: ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಆಡಳಿತದಲ್ಲಿ ಪರಾಜಯಗೊಂಡಿದೆ. ಆದರೆ ಭಾರತ ಪ್ರಜಾಪ್ರಭುತ್ವ ನೀತಿಯ ಸದ್ಬಳಕೆ ಮತ್ತು ಸಂವಿಧಾನ ಮೌಲ್ಯಗಳ ಅನುಷ್ಠಾನದಿಂದ ಸಫಲವಾಗಿದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
        ಗಣರಾಜ್ಯೋತ್ಸವ ಅಂಗವಾಗಿ ಭಾನುವಾರ ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ, ಪಥಸಂಚಲನದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನದ ನೆಲೆಗಟ್ಟಿನಲ್ಲಿ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದೆ. ಪೂರ್ವಿಕರು ನಡೆಸಿದ ಹೋರಾಟ, ತ್ಯಾಗ ಇವುಗಳ ಫಲವಾಗಿ ನಾವಿಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇವೆ ಎಂದ ಅವರು ಸಂವಿಧಾನದ ಮೌಲ್ಯಗಳಿಂದಾಗಿ ಇಂದು ವಿಶ್ವವೇ ನಮ್ಮ ದೇಶವನ್ನು ಗೌರವಿಸುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸುವವರೇ ನಿಜವಾದ ದೇಶಭಕ್ತರು. ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸಲು ಯತ್ನ ನಡೆಸಲು ಕೆಲವು ಶಕ್ತಿಗಳು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು ಅದನ್ನು ವಿರೋ„ಸಿ, ಯಾವುದೇ ಬೆಲೆತೆತ್ತು ಮೌಲ್ಯಗಳನ್ನು ಸಂರಕ್ಷಿಸಲು ನಾವು ಕಟಿಬದ್ಧರು. ದೇಶಪ್ರೇಮಿಗಳಾದ ಯುವಜನತೆ ಮತ್ತು ವಿದ್ಯಾರ್ಥಿಗಳು ಇದರ ನೇತೃತ್ವ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಸುಕ್ಷೇಮ ರಾಷ್ಟ್ರ ನಿರ್ಮಾಣದ ಕನಸು ನನಸು ಮಾಡುವಲ್ಲಿ ನಮ್ಮ ಯತ್ನದ ಪ್ರಯಾಣವನ್ನು ತ್ವರಿತಗೊಳಿಸಬೇಕಾದ ಅಗತ್ಯವಿದೆ. ವಿಭಜನೆ ಮತ್ತು ಅವೈಜ್ಞಾನಿಕ ಕುರುಡುತನವನ್ನು ಬದಲಿಸಿ ಪ್ರಗತಿಪರ ಚಿಂತನೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗಿರುವ ಇಂಧನವನ್ನಾಗಿ ಬೆಳಕಿನತ್ತ ಸಾಗಬೇಕಾದ ಅಗತ್ಯವಿದೆ ಎಂದವರು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆ, ಮತೇತರ ಸಂಕಲ್ಪ, ಸಂವಿಧಾನ ದೇಶದ ಸಮಗ್ರ ಅಭಿವೃದ್ಧಿಯ ಅಡಿಪಾಯವಾಗಿದ್ದು, ಈ ವ್ಯವಸ್ಥೆಯ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಗೆ ಆದ್ಯತೆ ಕಲ್ಪಿಸಲಾಗಿದೆ. ಪ್ರಜಾತಂತ್ರವೂ ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ, ಮೂಲಭೂತ ಹಕ್ಕು, ನ್ಯಾಯವನ್ನು ಕಲ್ಪಿಸುತ್ತದೆ. ದೇಶವನ್ನು ಮತೇತರ ಆಶಯದೊಂದಿಗೆ ಮುನ್ನಡೆಸುವುದು ಗಣರಾಜ್ಯದ ಮುಖ್ಯ ಉದ್ದೇಶವಾಗಿದೆ ಎಂದರು.
        ಕಾರ್ಯಕ್ರಮದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾ„ಕಾರಿ ಡಾ|ಡಿ.ಸಜಿತ್‍ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾ„ಕಾರಿ ಜೇಮ್ಸ್ ಜೋಸೆಫ್, ಎಡಿಎಂ ದೇವಿದಾಸ್, ಎಎಸ್‍ಪಿ ಪಿ.ಪ್ರಶೋಭ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಖಾಲಿದ್, ಡೆಪ್ಯೂಟಿ ಕಲೆಕ್ಟರ್, ಜಿಲ್ಲಾ ಮಟ್ಟದ ಅ„ಕಾರಿಗಳು, ಸಿಬಂದಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಜನಪ್ರತಿನಿ„ಗಳು, ಪೆÇಲೀಸ್ ಸಿಬಂದಿಗಳು, ರಾಜಕೀಯ ಪಕ್ಷಗಳ ನೇತಾರರು, ಪ್ರತಿನಿ„ಗಳು, ಅಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಮೊದಲಾದವರು ಉಪಸ್ಥಿತರಿದ್ದರು.
           ಪ್ರಜಾಪ್ರಭುತ್ವ ದಿನಾಚರಣೆಯಂಗವಾಗಿ ನಡೆದ ಪಥಸಂಚಲನಕ್ಕೆ ಆದೂರು ಪೆÇಲೀಸ್ ಇನ್ಸ್‍ಪೆಕ್ಟರ್ ಪ್ರೇಂ ಸದನ್ ನೇತೃತ್ವ ನೀಡಿದರು. ಜಿಲ್ಲಾ ಹೆಡ್ ಕ್ವಾಟರ್ಸ್‍ನ ರಿಸರ್ವ್ ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಸಶಸ್ತ್ರ ದಳ, ಅಬಕಾರಿ, ಕೆ.ಪಿ.ನಾಲ್ಕನೇ ಬೆಟಾಲಿಯನ್, ಬ್ಯಾಂಡ್ ತಂಡ, ವಿವಿಧ ಶಿಕ್ಷಣಾಲಯಗಳ ಎನ್‍ಸಿಸಿ ಸೀನಿಯರ್, ಎನ್‍ಸಿಸಿ ಜ್ಯೂನಿಯರ್, ವಿವಿಧ ಶಿಕ್ಷಣಾಲಯಗಳ ಸ್ಕೌಟ್ ಮತ್ತು ಗೈಡ್ಸ್, ವಿದ್ಯಾರ್ಥಿ ಪೆÇಲೀಸ್, ಬ್ಯಾಂಡ್ ತಂಡ, ನೌಕಾ ಪಡೆ, ರೆಡ್ ಕ್ರಾಸ್ ಮೊದಲಾದ ತಂಡಗಳು ಭಾಗವಹಿಸಿದ್ದುವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries