ಮಂಜೇಶ್ವರ: ಅರಸು ಅಂಕಲ ದೈವಕ್ಷೇತ್ರ ಸಂತಡ್ಕದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಜಯ ಫ್ರೆಂಡ್ಸ್ ಕ್ಲಬ್ ಸಂತಡ್ಕ ವತಿಯಿಂದ ಯಕ್ಷಗಾನ ಯುವ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರನ್ನು ಅರಸಂಕಲ ಕಲಾ ಪ್ರಶಸ್ತಿ-2020ನ್ನು ಗಣ್ಯರ ಉಪಸ್ಥಿತಿತಿಯಲ್ಲಿ ಪ್ರದಾನಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಇವರನ್ನು ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀಧರ್ ಭಟ್ ಉಪ್ಪಳ ವಹಿಸಿದ್ದರು. ಸನ್ಮಾನಿತರ ಬಗ್ಗೆ ಗುರುರಾಜ್ ಹೊಳ್ಳ ಬಾಯಾರು ಮಾತನಾಡಿದರು. ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.


