ಕಾಸರಗೋಡು: ರಾಜ್ಯದ ಜನತೆಯ ಸಮಗ್ರ ಅಭಿವೃದ್ಧಿಗೆ ರತ್ನಗಂಬಳಿ ಹಾಸುತ್ತಿರುವ ಕೇರಳ ಇನ್ರಾಸ್ಟ್ರಕ್ಚರ್ ಇನ್‍ವೆಸ್ಟ್‍ಮೆಂಟ್ ಫಂಡ್ ಬೋರ್ಡ್ (ಕಿಫ್ ಬಿ) ನ ಬಗ್ಗೆ ಅರಿತುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಮಂದಿಗೂ ಅವಕಾಶ ತೆರೆದುಕೊಳ್ಳುತ್ತಿದೆ. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಪ್ರಗತಿ ಸಾ„ಸುತ್ತಿರುವ ಮತ್ತು ಕಿಫ್ ಬಿ ಆರ್ಥಿಕ ಲಭ್ಯತೆ ಖಚಿತಪಡಿಸುವ ಯೋಜನೆಗಳ ಅಭಿವೃದ್ಧಿ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಜ.28ರಂದು ಆರಂಭಗೊಳ್ಳಲಿದೆ.
ನುಳ್ಳಿಪ್ಪಾಡಿಯಲ್ಲಿ ಅಂದು ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವರು. ಮೂರು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಅಭಿವೃದ್ಧಿ ಯೋಜನೆಗಳ ವಿವಿಧ ದೃಶ್ಯರೂಪಗಳು, ಮಾದರಿಗಳು, ವೆಲ್ಚ್ವರ್ ರಿಯಾಲಿಟಿ, ವೀಡಿಯೋಗಳು, ಆನಿಮೆಷನ್, ಜಿಯೋಗ್ರಾಫಿಕ್ ಇನ್‍ಫಾರ್ಮೇಷನ್ ಸಿಸ್ಟಂ, ಬಿಲ್ಡಿಂಗ್ ಇನ್‍ಫಾರ್ಮೇಷನ್ ಮಾಡೆಲ್‍ಗಳು ಇತ್ಯಾದಿ ಇರುವುವು.
ವಿವಿಧ ಇಲಾಖೆಗಳ ಮೂಲಕ ರಾಜ್ಯದಲ್ಲಿ 50 ಸಾವಿರ ಕೊಟಿ ರೂ.ನ ಮೂಲಭೂತ ಸೌಲಭ್ಯ ಅನುಷ್ಠಾನ ಗೊಳಿಸುವ ಯೋಜನೆಗಳನ್ನು ಕಿಫ್ ಬಿ ಸಿದ್ಧಪಡಿಸಿದೆ. ಈ ವರೆಗೆ 45,619 ಕೋಟಿ ರೂ.ನ 591 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಎಲ್ಲವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲೆಯ ಜನತೆಗೆ ಈ ಪ್ರದರ್ಶನದ ಮೂಲಕ ಸಾಧ್ಯವಿದೆ.


