ಕಾಸರಗೋಡು: ಲೈಫ್ ಮಿಷನ್ ಯೋಜನೆಯ ಫೇಸ್ ಒಂದರಲ್ಲಿ ಅ„ಕ ಆರ್ಥಿಕ ಸಹಾಯ ಲಭಿಸಿದರೂ ಮನೆಯ ನಿರ್ಮಾಣ ಪೂರ್ತಿಗೊಳಿಸದೇ ಇರುವವರ ವಿರುದ್ಧ ಕಂದಾಯ ವಸೂಲಿ ಸಹಿತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅ„ಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ನವ ಕೇರಳಂ ಕ್ರಿಯಾ ಯೋಜನೆ ಪ್ರಗತಿ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಅವರ ವಿಶೇಷ ಕಾಳಜಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಿರ್ಮಿಸಲಾಗುವ ಮುಕ್ತ ವ್ಯಾಯಾಮ ಶಾಲೆ(ಓಪನ್ ಜಿಂ)ಗೆ `ಆರ್ದಂ ಜಿಂ' ಎಂಬ ನಾಮಕರಣ ನಡೆಸಲು ನಿರ್ಧರಿಸಲಾಗಿದೆ. ನವಕೇರಳಂ ಕ್ರಿಯಾ ಯೋಜನೆಯ 4 ಮಿಷನ್‍ಗಳ ಸಂಚಾಲಕರು ಸ್ಥಳೀಯಾಡಳಿತೆ ಸಂಸ್ಥೆಗಳ ಯೋಜನೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮತ್ತು ಈ ಸಂಬಂಧ ಜಿಲ್ಲಾ ಯೋಜನೆ ಸಮಿತಿಗೆ ವರದಿ ಸಲ್ಲಿಸುವಂತೆ ಸಭೆಯಲ್ಲಿ ಆದೇಶಿಸಲಾಯಿತು. ಆರ್ದಂ ಮಿಷನ್ ಅಂಗವಾಗಿ ವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮೊದಲಾದವರನ್ನು ಸ್ಥಳೀಯಾಡಳಿತೆ ಸಂಸ್ಥೆಗಳು ನೇಮಕ ನಡೆಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ಆದೇಶ ನೀಡುವಂತೆ ಜಿಲ್ಲಾ ವೈದ್ಯಾ„ಕಾರಿಗೆ ಜಿಲ್ಲಾ„ಕಾರಿ ಆದೇಶ ನೀಡಿದರು. ಲೈಫ್, ಆರ್ದಂ, ಹರಿತ ಕೇರಳಂ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಎಂಬ 4 ಮಿಷನ್‍ಗಳ ಚಟುವಟಿಕೆಗಳ ಅವಲೋಕನ ನಡೆಸಲಾಯಿತು.
ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್‍ಮೋಹನ್, ಹರಿತ ಕೇರಳಂ ಜಿಲ್ಲಾ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸನ್, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್, ಆರ್ದಂ ಮಿಷನ್ ಜಿಲ್ಲಾ ಸಂಚಾಲಕ ಡಾ.ಮನೋಜ್ ಕುಮಾರ್, ಪಿ.ಎ.ಯು. ಯೋಜನೆ ನಿರ್ದೇಶಕ ಕೆ. ಪ್ರದೀಪನ್, ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಜಿಲ್ಲಾ ಯೋಜನೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

