HEALTH TIPS

ಆಲಂಪಾಡಿ ವೆಂಕಟೇಶ ಶ್ಯಾನುಭಾಗ್ ಪ್ರಶಸ್ತಿಗೆ ವಿದುಷಿ ಶಕುಂತಳಾಕೃಷ್ಣಭಟ್ ಆಯ್ಕೆ

   
        ಕಾಸರಗೋಡು: ಈ ಬಾರಿಯ ಆಲಂಪಾಡಿ ವೆಂಕಟೇಶ ಶ್ಯಾನುಭಾಗ್ ಪ್ರಶಸ್ತಿಯನ್ನು ಸಂಗೀತ ವಿದುಷಿ ಶಕುಂತಳಾ ಕೃಷ್ಣಭಟ್ ಕುಂಚಿನಡ್ಕ ಅವರಿಗೆ ಪ್ರದಾನ ಮಾಡಲಾಗುವುದು. ಶಕುಂತಳಾ ಅವರು ದಕ್ಷಿಣ ಕನ್ನಡ, ಉಡುಪಿ, ಮ್ಯೆಸೂರು ಹಾಗೂ ಕಾಸರಗೋಡು ಜಿಲ್ಲೆಯ ಹಲವಾರು ಕೇಂದ್ರಗಳಲ್ಲಿ ಸಂಗೀತ ಕಛೇರಿಗ¼ನ್ನು ನಡೆಸಿಶೋತೃಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2016 ರದಶಂಬರ ದಲ್ಲಿ ಕಾಸರಗೋಡಿನ ಕೆಂದ್ರೀಯ ತೋಟದಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರಿಯ ಸಮ್ಮೆಳನದಲ್ಲಿ ಕಛೇರಿ ನಡೆಸಿಕೊಟ್ಟ ಹೆÉಗ್ಗಳಿಕೆ ಇವರದು. ಎಪ್ಪÀತ್ತೈದರಹರೆಯದಲ್ಲಿರುವ ಶಕುಂತಳಾ ತಮ್ಮ ಕಂಠಸಿರಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ ಇವರು ಪೆರ್ಲ ಕೃಷ್ಣ ಭಟ್ ರಚನೆಯ ಮಧೂರು ಕ್ಷೇತ್ರದ ಸುಪ್ರಭಾತವನ್ನು 1974ರಲ್ಲಿ ಮೊತ್ತಮೊದಲ ಬಾರಿಗೆ ರಾಗ ಸಂಯೋಜಿಸಿ ಹಾಡಿದ್ದು, ಇದು ದಕ್ಷಿಣ ಭಾರತದಾದ್ಯಂತ ಪ್ರಚಾರಪಡೆದುಕೊಂಡಿದೆ. ಇವರ ಸಂಗೀತ ವಿದ್ವತ್ ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದೆ. ಗಡಿನಾಡು ಜಿಲ್ಲೆಯ ಹಿರಿಯ ಕಲಾವಿದೆಯಾಗಿರುವ ಶಕುಂತಲಾ ಅವರು ಸ್ವತಃ ಕೆಲವು ವಚನ ರೂಪದ ದೇವರನಾಮಗಳನ್ನು ರಚಿಸಿರುತ್ತಾರೆ. ಇವರು ಬಂಟ್ವಾಳ ತಾಲೂಕಿನ ಅಳಿಕೆಯ ಜೆಡ್ಡು ಗಣಪತಿ ಭಟ್ ಹಾಗೂ ಜೆಡ್ಡು ಗೌರಮ್ಮನವರ ಪುತ್ರಿಯಾಗಿದ್ದಾರೆ. ಹತ್ತು ವರ್ಷಗಳ ತನಕ ತನ್ನ ತಾಯಿಯಿಂದ ಸಂಗೀತಾಭ್ಯಾಸ ಪಡೆದ ನಂತರ ಚಕ್ರಕೋಡಿನಾರಾಯಣಶಾಸ್ತ್ರಿಗಳ ಬಳಿ ಸಂಗೀತಾಭ್ಯಾಸ ಮುಂದುವರಿಸಿ, ಇವರ ಮಾರ್ಗದರ್ಶನದಲ್ಲಿ ಮದ್ರಾಸ್‍ವಿಶ್ವವಿದ್ಯಾನಿಲಯ ಮಟ್ಟದ ಪರೀಕ್ಷೆಗಳನ್ನು ಪೂರೈಸಿದ್ದರು.
         26ರಂದು ಪ್ರಶಸ್ತಿಪ್ರದಾನ:
    ಆಲಂಪಾಡಿ ವೆಂಕಟೇಶ ಶ್ಯಾನುಭಾಗ್ ಅವರ 35ನೇ ವಾರ್ಷಿಕ ಸಂಸ್ಮರಣೆ, ಸಂಗೀತೋತ್ಸವ ಕಾರ್ಯಕ್ರಮ ಜನವರಿ 26ರಂದು ಮಧ್ಯಾಹ್ನ 2ಗಂಟೆಗೆ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ 'ವೆಂಕಟೇಶ'ದಲ್ಲಿ ಜರುಗಲಿದ್ದು, ಈ ಸಂದರ್ಭ ಪ್ರಶಸ್ತಿಪ್ರದಾನ ಮಾಡಲಾಗುವುದು.
2ಗಂಟೆಗೆ ಸಂಗೀತಾರಾಧನೆ ನಡೆಯುವುದು. ಸಾಯಂಕಾಲ 5.30ಕ್ಕೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಸಮಾರಂಭ ಉದ್ಘಾಟಿಸುವರು. ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. 6ಕ್ಕೆ ನಡೆಯುವ ಸಂಗೀತ ಕಛೇರಿಯಲ್ಲಿ ದಿಲೀಪ್ ಕುಮಾರ್ ತ್ರಿಚೂರ್ ಅವರ ಹಾಡುಗಾರಿಕೆ ನಡೆಯುವುದು. ವಯಲಿನ್‍ನಲ್ಲಿ ಕೆ.ಜೆ ದಿಲೀಪ್ ಚೆನ್ನೈ, ಮೃದಂಗದಲ್ಲಿ ಡಾ. ಶಂಕರ್‍ರಾಜ್, ಘಟಂನಲ್ಲಿ ಸಂತೋಷ್ ಕುಮಾರ್ ಸಹಕರಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries