ಕಾಸರಗೋಡು: ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಅಯ್ಯಂಗಾಳಿ ಸ್ಮಾರಕ ಟ್ಯಾಲೆಂಟ್ ಸರ್ಚ್ ಆ್ಯಂಡ್ ಡೆವೆಲಪ್‍ಮೆಂಟ್ ಸ್ಕಾಲರ್‍ಶಿಪ್‍ಗೆ ಅರ್ಜಿ ಆಹ್ವಾನಿಸಿದೆ.
2020-21 ಶೈಕ್ಷಣಿಕ ವರ್ಷದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಸಂಬಂಧ 4ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಈ ಪಂಗಡದ ವಿದ್ಯಾರ್ಥಿಗಳಿಗಾಗಿ ಮಾ.7ರಂದು ಮಧ್ಯಾಹ್ನ 2 ಗಂಟೆಗೆ ಪರವನಡ್ಕ ಮಾದರಿ ವಸತಿ ಶಾಲೆಯಲ್ಲಿ ಸ್ಪರ್ಧಾ ಪರೀಕ್ಷೆ ನಡೆಯಲಿದೆ. ಪರಿಶಿಷ್ಟ ಪಂಗಡದಲ್ಲಿರುವ, ವಾರ್ಷಿಕ ಕೌಟುಂಬಿಕ ಆದಾಯ 50 ಸಾವಿರ ರೂ.ಗಿಂತ ಮೀರಿರದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಅರ್ಜಿ ಫಾರಂ ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಕಚೇರಿ, ಪನತ್ತಡಿ ಬುಡಕಟ್ಟು ವಿಸ್ತರಣೆ ಕಚೇರಿ, ಕಾಸರಗೋಡು, ಎಣ್ಮಕಜೆ, ನೀಲೇಶ್ವರ ಬುಡಕಟ್ಟು ಕಚೇರಿಗಳಲ್ಲಿ ಲಭ್ಯವಿದೆ. ಭರ್ತಿಗೊಳಿಸಿದ ಅರ್ಜಿಯನ್ನು ಶಾಲಾ ಮುಖ್ಯಸ್ಥರ ದೃಢೀಕರಣ ಸಹಿತ ಟ್ರೈಬಲ್ ಡೆವೆಲಪ್‍ಮೆಂಟ್ ಆಫೀಸ್ ಯಾ ಟ್ರೈಬಲ್ ಎಕ್ಸ್ ಟೆನ್ಶನ್ ಕಚೇರಿಗೆ ಜ.31ರ ಮುಂಚಿತವಾಗಿ ಸಲ್ಲಿಸಬೇಕು. ದೂರಾಣಿ ಸಂಖ್ಯೆ: 04994-255466.

