ಬದಿಯಡ್ಕ: ತೊಕ್ಕೋಟಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಇತ್ತೀಚೆಗೆ ನಡೆಯಿತು. ಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವದಂಗವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು. ಸವ್ಯಸಾಚಿ ಯಕ್ಷಗಾನಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರಭಾ ಪರಿಣಯ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು. ಪಾತ್ರವರ್ಗದಲ್ಲಿ ದೇವೇಂದ್ರನಾಗಿ ಶ್ರೀಹರಿ ಮವ್ವಾರು, ಅಗ್ನಿಯಾಗಿ ಕಿಶನ್ ಅಗ್ಗಿತ್ತಾಯ, ವರುಣನಾಗಿ ಮನ್ವಿತ್ ಕೃಷ್ಣ, ನಾರದನಾಗಿ ಮನಸ್ವಿನಿ, ಸ್ವಯಂಪ್ರಭೆಯಾಗಿ ಸುಪ್ರೀತಾ ಸುಧೀರ್, ಮಿತ್ರಶೋಭೆಯಾಗಿ ಉಪಾಸನಾ ಪಂಜರಿಕೆ, ಕಮಲಗಂಧಿ ಹಾಗೂ ಬ್ರಹ್ಮನಾಗಿ ಅಭಿಜ್ಞಾ ಬೊಳುಂಬು, ಶಂಖಚೂಡನಾಗಿ ಶ್ರೀಶ ಪಂಜಿತ್ತಡ್ಕ, ಪದ್ಮಚೂಡನಾಗಿ ಆಕಾಶ್ ಬದಿಯಡ್ಕ, ಕೃಷ್ಣನಾಗಿ ವಿದ್ಯಾ ಕುಂಟಿಕಾನಮಠ, ರಾಣಿಯರಾಗಿ ಸುಮಿತಾ ಅಡೂರು ಮತ್ತು ವರ್ಷಾಲಕ್ಷ್ಮಣ್, ಶಿವನಾಗಿ ರಾಜೇಶ್ ಕುಂಪಲ, ಶೃಂಗಿಯಾಗಿ ವರ್ಷಾ ಲಕ್ಷ್ಮಣ್, ಷಣ್ಮುಖನಾಗಿ ಆಯುಶ್ ಲಕ್ಷ್ಮಣ್ ಪಾತ್ರಗಳಿಗೆ ಜೀವತುಂಬಿದರು. ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ ಹಾಗೂ ಚಕ್ರತಾಳದಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಸಹಕರಿಸಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ, ರಾಜೇಶ್, ಗಿರೀಶ್ ಕುಂಪಲ ಸಹಕರಿಸಿದರು.
ರಂಗಸಿರಿಯಿಂದ ತೊಕ್ಕೋಟಿನಲ್ಲಿ ಜನಮನಸೂರೆಗೊಂಡ ಸ್ವಯಂಪ್ರಭೆ ಯಕ್ಷಗಾನ ಪ್ರದರ್ಶನ
0
ಜನವರಿ 22, 2020