ಬದಿಯಡ್ಕ: ಮಂಗಳೂರು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ, ಉದ್ಯಮಿ ಮಧುಸೂದನ ಆಯರ್ ಭಾನುವಾರ ಸಂಜೆ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರಕ್ಕೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ನೂತನ ಭೋಜನ ಶಾಲೆ, ಸಭಾಭವನದ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾದ ಮಧುಸೂದನ ಆಯರ್ ಅವರು ಮಾತನಾಡಿ ನಮ್ಮೊಳಗಿನ ಐಕ್ಯತೆ, ಪ್ರೀತಿ ವಿಶ್ವಾಸಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರತಿಯೊಬ್ಬರ ಒಳಗೆ ಹುದುಗಿರುವ ನಾನು ಸರಿಯಾದರೆ ಮಾತ್ರ ಸಮಾಜವು ಪ್ರಗತಿಹೊಂದಲು ಸಾಧ್ಯವಿದೆ. ಭೋಜನ ಶಾಲೆಯ ಹಾಗೂ ಶ್ರೀ ಮಂದಿರದ ಕುರಿತು ಮಾತನಾಡುತ್ತಾ ಹಿರಿಯರ ಶ್ರಮ ಹಾಗೂ ಕಾಳಜಿಯಿಂದ ಇಂದು ಇಂತಹ ಒಂದು ಭವ್ಯವಾದ ಮಂದಿರ ನಮ್ಮ ಮುಂದಿದೆ. ಅವರ ಕನಸನ್ನು ಪೂರೈಸುವ ಜವಾಬ್ದಾರಿ, ಕರ್ತವ್ಯ ನಮ್ಮದಾಗಿದೆ. ಭೋಜನ ಶಾಲೆ ಹಾಗೂ ಸಭಾಭವನ ಕಾರ್ಯಗಳು ಅತಿಶೀಘ್ರದಲ್ಲಿ ಪೂರ್ತಿಗೊಳಿಸಬೇಕಿದೆ ಎಂದು ತಿಳಿಸಿ 51,000 ರೂಪಾಯಿ ಧನಸಹಾಯವನ್ನು ನೀಡಿದರು.
ಅಗಲ್ಪಾಡಿ ಯಾದವ ಸಭಾದ ಅಧ್ಯಕ್ಷ ಕುಂಞÂ್ಞರಾಮ ಮಣಿಯಾಣಿ ಮಾರ್ಪನಡ್ಕ, ರಕ್ಷಾಧಿಕಾರಿ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು ಮಾತನಾಡಿದರು. ಶ್ರೀಮಂದಿರ ಗೌರವಾಧ್ಯಕ್ಷರಾದ ಬಾಬು ಮಣಿಯಾಣಿ ಜಯನಗರ ಅತಿಥಿಗಳನ್ನು ಶಾಲು ಹೊದಿಸಿ ಮಂದಿರದ ವತಿಯಿಂದ ಸನ್ಮಾನಿಸಿದರು. ಅಗಲ್ಪಾಡಿ ಯಾದವ ಸಭಾದ ಪ್ರಧಾನ ಕಾರ್ಯದರ್ಶಿ ನಾರಾಯಣ ಪದ್ಮಾರು, ಮಂದಿರದ ಉಪಾಧ್ಯಕ್ಷರುಗಳಾದ ಸುಧಾಮ ಮಣಿಯಾಣಿ, ಬಾಲಕೃಷ್ಣ ನಾರಂಪಾಡಿ, ಮಂದಿರದ ಯುವ ವಿಭಾಗದ ಅಧ್ಯಕ್ಷರಾದ ರವಿಂದ್ರ ಜಯನಗರ, ಯಾದವ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ ಕಲ್ಲಕಟ್ಟ, ಮಂದಿರದ ಸದಸ್ಯರುಗಳಾದ ಚಂದ್ರ ಪದ್ಮಾರು, ಬಾಬು ಮಣಿಯಾಣಿ ಬೆದ್ರುಕೂಡ್ಲು, ದೀಪಕ್ ಬೆದ್ರುಕೂಡ್ಲು, ಮನೋಹರ ಜಯನಗರ, ಶ್ರೀಧರ ಪದ್ಮಾರು, ಉದಯ ಪದ್ಮಾರು, ಹರ್ಷಿತ್ ಎ.ಎಸ್., ಸುಶೀಲ ಪದ್ಮಾರು, ಶ್ರೀದೇವಿ ಜಯನಗರ, ಗೀತಾ ಅಗಲ್ಪಾಡಿ, ಶಿವರಾಮ ಪದ್ಮಾರು, ವಿಧುಬಾಲ, ರಾಧಾಕೃಷ್ಣ ನಾರಂಪಾಡಿ ಉಪಸ್ಥಿತರಿದ್ದರು. ಶ್ರೀಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಪ್ರ.ಕಾರ್ಯದರ್ಶಿ ರಮೇಶ ಕೃಷ್ಣ ಪದ್ಮಾರು ವಂದಿಸಿದರು.

