ಕಾಸರಗೋಡು: ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಸಂಘದ 63ನೇ ಭಜನಾ ವಾರ್ಷಿಕೋತ್ಸವವು ಫೆ.1 ರಂದು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಜರಗಲಿರುವುದು.ಇದರ ಆಮಂತ್ರಣ ಪತ್ರಿಕೆಯನ್ನು ಮಂದಿರದಲ್ಲಿ ಇತ್ತೀಚೆಗೆ ವಾರದ ಪೂಜೆಯ ಬಳಿಕ ದೇವರ ನಡೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯ ಹಾಗೂ ಪೆರ್ಣೆ ವಿಷ್ಣು ಆಚಾರ್ಯ ಇವರು ಪ್ರಾರ್ಥನೆ ಮಾಡಿ ಜಗದ್ಗುರುಗಳಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹವನ್ನು ಪ್ರಾರ್ಥಿಸಿ ಕಾರ್ಯದರ್ಶಿ ಪೆರ್ಣೆ ಮಧುಸೂದನ ಆಚಾರ್ಯ ವಿಘ್ನೇಶ ಆಚಾರ್ಯ ಮಂಗಳೂರು ಇವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ತುಕರಾಮ ಆಚಾರ್ಯ ಕೆರೆಮನೆ, ಯುವಕ ಸಂಘದ ಅಧ್ಯಕ್ಷರಾದ ಶೀತಲ್ ಕುಮಾರ್, ಆಮಂತ್ರಣ ಪತ್ರಿಕೆ ಜಾಹಿರಾತು ವ್ಯವಸ್ಥೆಯ ವಸಂತ ಆಚಾರ್ಯ ಕೆರೆಮನೆ, ಶಶಿಧರ ಆಚಾರ್ಯ ನೀರ್ಚಾಲ್ ಮತ್ತು ವಿನ್ಯಾಸಗಾರ ಸಂತೋಷ್ ಆಚಾರ್ಯ (ತ್ರಿದಳ್ ಡಿಸೈನ್) ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿಶ್ವಕರ್ಮ ಭಜನಾ ಮಂದಿರದ ವಾರ್ಷಿಕೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ
0
ಜನವರಿ 20, 2020