HEALTH TIPS

ವಧುವಿನ ಅಮ್ಮನೊಂದಿಗೆ ಓಡಿ ಹೋದ ವರನ ಅಪ್ಪ!- ನಿಂತು ಹೋದ ಮದುವೆ!

   
      ಸೂರತ್: ನೀವು ಎಷ್ಟೋಂದು ಪ್ರೇಮಕಥಾನಕಗಳನ್ನು ಓದಿರಬಹುದು, ನೋಡಿರಬಹುದು ಆದರೆ ಗುಜರಾತಿನಲ್ಲಿ ನಡೆದ ಒಂದು ನೈಜ ಘಟನೆಯ ಅಂತ್ಯ ಮಾತ್ರ ನೀವು ಇದುವರೆಗೆ ನೋಡಿದ ಅಥವಾ ಓದಿದ ಯಾವ ಪ್ರೇಮಕಥೆಯಲ್ಲೂ ಇರಲು ಸಾಧ್ಯವಿಲ್ಲವೇನೊ? ಅಂತಹಾ ಒಂದು ವಿಚಿತ್ರ ಪ್ರೇಮಕಥೆ ಇದು!
    ಯುವಜೋಡಿಯು ತಾವಿನ್ನು ಒಂದು ವಾರದಲ್ಲಿ ಹಸೆಮಣೆ ಏರಬೇಕಿದ್ದಾಗ ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಅವರಿಬ್ಬರ ನಡುವಿನ ಮನಸ್ತಾಪವಾಗಲಿ, ಭಿನ್ನಮತವಾಗಲಿ ಅಲ್ಲ ಬದಲಿಗೆ ವರನ ತಂದೆ ವಧುವಿನ ತಾಯಿಯೊಡನೆನಾಪತ್ತೆಯಾಗಿರುವುದು! ಹೌದು, ಇಂತಹಾ ವಿಚಿತ್ರ ಘಟನೆಯೊಂದು ಗುಜರಾತಿನ ಸೂರತ್ ನಲ್ಲಿ ವರದಿಯಾಗಿದೆ.
      ಮಾದ್ಯಮ ವರದಿಗಳ ಪ್ರಕಾರ ಮದ್ಯಮ ವಯಸ್ಸಿನ ಆ ಜೋಡಿ ಜನವರಿ ತಿಂಗಳ ಪ್ರಾರಂಭದಲ್ಲಿ ನಾಪತ್ತೆಯಾಗಿದೆ. ಅವರ ಕುಟುಂಬಗಳು ಜೋಡಿ ನಾಪತ್ತೆಯಾದ 10 ದಿನಗಳ ನಂತರ ಪೆÇಲೀಸ್ ದೂರು ದಾಖಲಿಸಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಯುವ ಜೋಡಿ ಮದುವೆಯಾಗಲುನಿರ್ಧರಿಸಿದ್ದರು. ಆದರೆ ಅದಕ್ಕೆ ಮುನ್ನ 48 ವರ್ಷದ ವ್ಯಕ್ತಿ ಮತ್ತು 46 ವರ್ಷದ ಮಹಿಳೆಯೊಂದಿಗೆ ನಾಪತ್ತೆಯಾಗಿದ್ದಾನೆ! ಕತಾಗರ್ಂ ಹಾಗೂ ನವಸರಿ ಗ್ರಾಮದಲ್ಲಿರುವ ಅವರ ನಿವಾಸದಿಂದ ಅವರು ನಾಪತ್ತೆಯಾಗಿದ್ದಾರೆ.  ವಿಶೇಷವೆಂದರೆ ಯುವಜೋಡಿ ಒಂದು ವರ್ಷದ ಕೆಳಗೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆಗೆ ತಯಾರಿ ನಡೆಸುತ್ತಿದ್ದ ಈ ಜೋಡಿ ಈ ವಿಚಿತ್ರ ಪರಊಪದ ಘಟನೆ ಬಳಿಕ ತಮ್ಮ ವಿವಾಹವನ್ನು ಸ್ಥಗಿತಗೊಳಿಸಿದೆ.
     ಮಧ್ಯವಯಸ್ಕ ಪುರುಷ ಮತ್ತು ಮಹಿಳೆ ತಮ್ಮ ಸಣ್ಣ ವಯಸ್ಸಿನಿಂದಲೂ ಪರಸ್ಪರ ಪರಿಚಯಸ್ಥರಾಗಿದ್ದರು. ಅವರು ಸೂರತ್‍ನ ಕತಾಗರ್ಂ ಪ್ರದೇಶದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸವಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು.ಕೆಲವು ವರ್ಷಗಳ ಹಿಂದೆ ಸಹ ಓಡಿಹೋಗುವ ಪ್ರಯತ್ನ ಮಾಡಿದ್ದರು.ಆದರೆ ಮಹಿಳೆಯ ಕುಟುಂಬ  ವಜ್ರದ ವ್ಯಾಪಾರಿಯೊಂದಿಗೆ ಆಕೆಯ ಮದುವೆ ಮಾಡಿಸಿದ್ದ ಕಾರಣ ಅವರ ಸಂಬಂಧವು ಕೊನೆಯಾಗಿತ್ತು. ಇನ್ನು ಆ ವ್ಯಕ್ತಿ ಕೂಡ ಮುಂದೆ ಜವಳಿ ಉದ್ಯಮಿಯಾಗಿ, ಸ್ಥಳೀಯ ರಾಜಕಾರಣಿಯಾಗಿ ಬೆಳೆದನಲ್ಲದೆ ಬೇರೊಬ್ಬಳನ್ನು ವಿವಾಹವಾಗಿದ್ದ ಎಂದು ಪೆÇೀಲೀಸರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries