ಕುಂಬಳೆ: ಕುಂಬಳೆ ಬಳಿಯ ಇಚ್ಲಂಪಾಡಿ ಮುಂಡಪಳ್ಳ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಶ್ರೀರಾಜರಾಜೇಶ್ವರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.28 ರಿಂದ ಮಾ.7 ರತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಕಾರಿಂಜ ಶ್ರೀ ಮಹಾದೇವ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಆಡಳಿತ ಟ್ರಸ್ಟ್ ಅಧ್ಯಕ್ಷ ಕೆ.ಕೆ.ಶೆಟ್ಟಿ ಮತ್ತು ಪ್ರಮುಖರಾದ ವಿನಯಾ ಕೆ.ಕೆ.ಶೆಟ್ಟಿ, ಕೆ.ಪಿ.ರೈ ಕುತ್ತಿಕ್ಕಾರು, ಎಂ.ಮಂಜುನಾಥ ಆಳ್ವ ಮಡ್ವ, ಕಡಾರು ವಿಶ್ವನಾಥ ರೈ, ಶಿವರಾಮ ಭಟ್ ಹಳೆಮನೆ, ಎಸ್.ಎನ್. ರಾವ್ ಮುನ್ನಿಪ್ಪಾಡಿ, ರಾಮ ಭಟ್ ಹಳೆಮನೆ, ಉಷಾ ಶಿವರಾಮ ಭಟ್, ನಿತಿನ್ ಶೆಟ್ಟಿ ಅಗರಿ, ಜಯಪ್ರಸಾದ್ ರೈ, ವಿನೋದಾ ಜಯಪ್ರಸಾದ್ ರೈ, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು, ರಾಮ ಕಾರ್ಲೆ, ರಾಘವ ದರ್ಬಾರ್‍ಕಟ್ಟೆ, ಹರೀಶ್ ಆಳ್ವ ಉಜಾರು,ಮೋಹನ ಶೆಟ್ಟಿ,ರಘುರಾಮ ಶೆಟ್ಟಿ ಕೊರಂಗಳ, ರಮಿತ್ ಆಳ್ವ ಮಡ್ವ ಉಪಸ್ಥಿತರಿದ್ದರು.


