ಕುಂಬಳೆ: ಕಾನಮಠ ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ವಾರ್ಷಿಕ ಹೊಸ್ತಿನ ದೇವಕಾರ್ಯ ಹಾಗೂ ದೈವಗಳ ಕೋಲ ಇಂದು ಹಾಗೂ ನಾಳೆ(ಜ.25-26) ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಕೊಪ್ಪರಿಗೆ ಮುಹೂರ್ತ ನೆರವೇರಿತು. ಇಂದು(25ರಂದು) ಬೆಳಿಗ್ಗೆ 8ಕ್ಕೆ ರುದ್ರ ಪಠಣ, 10.30 ರಿಂದ ತುಲಾಭಾರ ಸೇವೆ, 11.30 ರಿಂದ ಮಹಾಪೂಜೆ ನಡೆಯಲಿದೆ. ಸಂಜೆ 7.30 ಕ್ಕೆ ಭಂಡಾರ ಮನೆಯಿಂದ ಶ್ರೀಧೂಮಾವತಿ ದೈವಗಳ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀಶಂಕರನಾರಾಯಣ ಮಠಕ್ಕೆ ಆಗಮನ, ದೇವರ ಮಹಾಪೂಜೆ ನಡೆಯಲಿದೆ.
ಭಾನುವಾರ ಬೆಳಿಗ್ಗೆ 10 ರಿಂದ ಶ್ರೀಧೂಮಾವತಿ ದೈವದ ಕೋಲ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


