ನವದೆಹಲಿ: ಯುನೈಟೆಡ್ ಪೆÇೀರಮ್ ಆಫ್ ಬ್ಯಾಂಕ್ ಯೂನಿಯನ್ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಜನವರಿ 31ರಿಂದ ಎರಡು ದಿನಗಳ ಕಾಲ ಮುಷ್ಕರ ನಡೆಯಲಿದೆ.
ವೇತನ ಪರಿಷ್ಕರಣೆಗೆ ಬ್ಯಾಂಕ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 31 ಮತ್ತು ಫೆಬ್ರವರಿ 1ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಯೂನಿಯನ್ ಹೇಳಿದೆ.
ಮುಷ್ಕರದ ದಿನ ಯಾವುದೇ ಬ್ಯಾಂಕ್ ವಹಿವಾಟು ಇರುವುದಿಲ್ಲ ಎಂದು ಯುಎಫ್‍ಬಿ ಸಿದ್ದಾರ್ಥ್ ಖಾನ್ ಹೇಳಿದ್ದಾರೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಯುನೈಟೆಡ್ ಪೆÇೀರಮ್ ಆಫ್ ಬ್ಯಾಂಕ್ ಯೂನಿಯನ್ 9 ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುತ್ತದೆ. ಭಾರತೀಯ ಬ್ಯಾಂಕ್‍ಗಳ ಪದಾಧಿಕಾರಿಗಳ ಜೊತೆ ಕಾರ್ಮಿಕರ ವೇತನ ಪರಿಷ್ಕರಣೆ ಬಗ್ಗೆ ಸಭೆ ನಡೆದಿತ್ತು. ಆದರೆ, ಸಭೆ ವಿಫಲವಾಗಿತ್ತು. ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುತ್ತದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಏಪ್ರಿಲ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಯುನೈಟೆಡ್ ಪೆÇೀರಮ್ ಆಫ್ ಬ್ಯಾಂಕ್ ಯೂನಿಯನ್ ಎಚ್ಚರಿಕೆ ನೀಡಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದೇ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರಕ್ಕೆ ಕರೆ ಕೊಟ್ಟಿರುವ ಯುಎಫ್‍ಬಿ ಜೊತೆ ಇನ್ನೊಮ್ಮೆ ಮಾತುಕತೆ ನಡೆಯಲಿದೆಯೇ ಎಂದು ನಿರೀಕ್ಷಿಸಲಾಗುತ್ತಿದೆ.


