ಕಾಸರಗೋಡು: ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ಜ.24 ರಿಂದ 29 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.24 ರಂದು ರಾತ್ರಿ 7 ಕ್ಕೆ ವಾಸ್ತು ಪೂಜೆ, 25 ರಂದು ಬೆಳಗ್ಗೆ 10.30 ಕ್ಕೆ ಹೊರೆಕಾಣಿಕೆ ಸಮರ್ಪಣೆ, 10.30 ಕ್ಕೆ ಉಗ್ರಾಣ ತುಂಬಿಸುವುದು, ಸಂಜೆ 4.30 ಕ್ಕೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ, 5.30 ರಿಂದ ಧಾರ್ಮಿಕ ಸಭೆ, ನಾಗ ಸನ್ನಿಧಿಯಲ್ಲಿ ಆಚಾರ್ಯವರಣ, ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ, 6.27 ಕ್ಕೆ ದೀಪಾರಾಧನೆ, ರಾತ್ರಿ 8 ಕ್ಕೆ ವಾರದ ಪೈಂಗುಟ್ಟಿ, 8.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
ಜ.26 ರಂದು ಬೆಳಗ್ಗೆ 10.48 ಕ್ಕೆ ನಾಗ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿಪೂಜೆ, ರಾತ್ರಿ 7 ರಿಂದ ನಾಟ್ಯ ಸಂಜೆ, 9 ಕ್ಕೆ ಯಕ್ಷಗಾನ, 27 ರಂದು ಬೆಳಗ್ಗೆ 9.50 ಕ್ಕೆ ಶ್ರೀ ಮುತ್ತಪ್ಪನ್ - ತಿರುವಪ್ಪನ್ ದೈವಗಳ ಪುನರ್ ಪ್ರತಿಷ್ಠೆ, 28 ರಂದು ಬೆಳಗ್ಗೆ 6 ಕ್ಕೆ ಶ್ರೀ ಮುತ್ತಪ್ಪನ್ - ತಿರುವಪ್ಪನ್ ದೈವಗಳ ವೆಳ್ಳಾಟ, 10 ಕ್ಕೆ ಸಿಡಿ ಮದ್ದು ಸೇವೆ, ಸಂಜೆ 5 ರಿಂದ ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ದೈವಗಳನ್ನು ಮಲೆ ಏರಿಸುವುದು, 29 ರಂದು ಸಂಜೆ 6.30 ಕ್ಕೆ ದೀಪಾರಾಧನೆ, 6.35 ಕ್ಕೆ ದೀಪ ಪ್ರತಿಷ್ಠೆ, ವಾರ್ಷಿಕ ಭಜನಾ ಕಾರ್ಯಕ್ರಮ ನಡೆಯುವುದು.

