ಕುಂಬಳೆ: ಕುಂಬಳೆಯ ಚಿರಂಜೀವಿ ವೇದಿಕೆಯಲ್ಲಿ `ನಿಕ್ಕಾದ್' ತುಳು ಆಲ್ಬಂ ಸಾಂಗ್‍ನ್ನು ಚಿರಂಜೀವಿಯ ಮಾಜಿ ಅಧ್ಯಕ್ಷ ನಾಗೇಶ್ ಕಾರ್ಲೆ ಹಾಗು ಚಿರಂಜೀವಿ ಅಧ್ಯಕ್ಷರಾದ ಮನೋಜ್ ಕುಂಬಳೆ ಅವರು ಕಣಿಪುರ ಉತ್ಸವದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನಟರಾದ ಕಿಶೋರ್ ಕುಂಬಳೆ, ಶ್ರೀಕಾಂತ್ ಕಾಸರಗೋಡು, ನಟಿಯರಾದ ಸಾರಿಕಾ ಧನೇಶ್, ಐಶ್ವರ್ಯ ರಾಜೇಶ್, ನಿರ್ದೇಶಕ ಮಂಜುನಾಥ ಪ್ರತಾಪನಗರ, ಸತ್ಯನಾರಾಯಣ, ಕಿರಣ್ ಕಲಾಂಜಲಿ, ಅಶ್ವಿನ್ ಗುರುಪ್ರಸಾದ್, ಬಬಿತಾ ಆಚಾರ್ಯ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.


