ಕಾಸರಗೋಡು: ರಾಜ್ಯದ ಪ್ರಥಮ ರಬ್ಬರ್ ಚೆಕ್ ಡ್ಯಾಂ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿದೆ.
ಈ ಯೋಜನೆಯ ಮೊದಲ ಹಂತವಾಗಿ ಜಿಲ್ಲೆಯ 5 ಪ್ರದೇಶಗಳಲ್ಲಿ ರಬ್ಬರ್ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ ಜಿಲ್ಲೆಯಲ್ಲಿ ಜಲಸಂರಕ್ಷಣೆ ನಡೆಸುವುದು ಮತ್ತು ನೆರೆ ಹಾವಳಿಗೆ ಪ್ರತಿರೋಧ ಚಟುವಟಿಕೆ ನಡೆಸುವುದು ಈ ಯೋಜನೆಯ ಉದ್ದೇಶ. ಅತಿ ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ನಿರ್ಮಿಸಲು ಸಾಧ್ಯವಾಗುವ ಈ ಯೋಜನೆಗೆ ಆಡಳಿತೆ ಮಂಜೂರಾತಿ ಲಭಿಸಿದೆ.
ಭುವನೇಶ್ವರದ ಐ.ಸಿ.ಎ.ಆರ್.ನ ವ್ಯಾಪ್ತಿಯ ಕೇಂದ್ರ ಸರಕಾರಿ ಸಂಸ್ಥೆ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ವಾಟರ್ ಮೆನೇಜ್‍ಮೆಂಟ್‍ನ ತಾಂತ್ರಿಕ ಸಹಾಯದೊಂದಿಗೆ ನೀರಾವರಿ ಇಲಾಖೆ ಈ ಯೋಜನೆ ಜಾರಿಗೊಳಿಸಲಿದೆ. 5 ರಬ್ಬರ್ ಚೆಕ್‍ಡ್ಯಾಂಗಳನ್ನು ನಿರ್ಮಿಸುವುದಕ್ಕಾಗಿ 243 ಲಕ್ಷ ರೂ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಮೀಸಲಿರಿಸಲಾಗಿದೆ.
1.5 ಮೀಟರ್ ನಿಂದ 2.5 ಮೀಟರ್ ಎತ್ತರದ ಜಲಸಂಗ್ರಹಾಗಾರ ಈ ನಿಟ್ಟಿನಲ್ಲಿ ನಿರ್ಮಿಸಲಾಗುವುದು. ಮಧೂರು ಗ್ರಾಮ ಪಂಚಾಯತ್‍ನ ಮಧುವಾಹಿನಿ ನದಿ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‍ನ ಆಲಂತಟ್ಟ-ನಪ್ಪಾಚ್ಚಾಲ್ ತೋಡು, ಪಿಲಿಕೋಡ್ ಗ್ರಾಮ ಪಂಚಾಯತ್‍ನ ಮಣಿಯಾಟ್ ನದಿ, ವರ್ಕಾಡಿ ಗ್ರಾಮ ಪಂಚಾಯತ್‍ನ ಮಂಜೇಶ್ವರ ನದಿ, ಪನತ್ತಡಿ ಗ್ರಾಮಪಂಚಾಯತ್‍ನ ಮಾಮಡ್ಕ - ಎರಿಂಞಲಕ್ಕೋಡ್ ತೋಡು ಸಹಿತ ಜಲಾಶಯಗಳಲ್ಲಿ ಮೊದಲ ಹಂತದಲ್ಲಿ ರಬ್ಬರ್ ಚೆಕ್ ಡ್ಯಾಂ ನಿರ್ಮಿಸಲಾಗುವುದು. ದಕ್ಷಿಣ ಭಾರತದಲ್ಲೇ ಊಟಿಯಲ್ಲಿ ಮಾತ್ರ ರಬ್ಬರ್ ಚೆಕ್ ಡ್ಯಾಂ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ ವಿಚಾರ. ಈ ಯೋಜನೆಯ ಜಾರಿಯ ಮೂಲಕ ಜಿಲ್ಲೆಯ ಜಲಕ್ಷಾಮಕ್ಕೆ ಪರಿಹಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸಂಬಂಧ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಜಿಲ್ಲಾ ಮಟ್ಟದ ಸಭೆ ಜಿಲ್ಲಾ„ಕಾರಿ ಕಚೇರಿಯಲ್ಲಿ ನಡೆದಿದ್ದು, ಆಡಳಿತೆ ಮಂಜೂರಾತಿ ನೀಡಲಾಯಿತು. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ವಿಶೇಷ ಅ„ಕಾರಿ ಇ.ಪಿ.ರಾಜ್ ಮೋಹನ್, ನೀರಾವರಿ ವಿಭಾಗ ಕಾರ್ಯಕಾರಿ ಎಂಜಿನಿಯರ್ ಎಸ್.ಕೆ.ರಮೇಶನ್, ಕಿರು ನೀರಾವರಿ ವಿಭಾಗ ಕಾರ್ಯಕಾರಿ ಎಂಜಿನಿಯರ್ ಡಿ.ರಾಜನ್, ಇತರ ಸದಸ್ಯರು ಉಪಸ್ಥಿತರಿದ್ದರು.
(ಚಿತ್ರ ಮಾಹಿತಿ : ಊಟಿಯಲ್ಲಿ ನಿರ್ಮಾಣವಾದ ರಬ್ಬರ್ ಚೆಕ್ ಡ್ಯಾಂ.)


