ಕಾಸರಗೋಡು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ಆಯೋಜಿಸಿದ ಕಾಸರಗೋಡಿನಿಂದ ಕಾಂಞಂಗಾಡ್‍ಗೆ ಲಾಂಗ್ ಮಾರ್ಚ್ ಉದ್ಘಾಟನೆಗೊಂಡಿತು.
ಜಾಥಾ ನಾಯಕ ರಾಜ್‍ಮೋಹನ್ ಉಣ್ಣಿತ್ತಾನ್ ಅವರಿಗೆ ಪತಾಕೆ ಹಸ್ತಾಂತರಿಸಿ ಪ್ರತಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಂಞÂಕಣ್ಣನ್, ಕಾರ್ಯದರ್ಶಿಗಳಾದ ಕೆ.ನೀಲಕಂಠನ್, ಜಿ.ರತಿ ಕುಮಾರ್, ಮುಸ್ಲಿಂ ಲೀಗ್ ರಾಜ್ಯ ಕೋಶಾ„ಕಾರಿ ಸಿ.ಟಿ.ಅಹಮ್ಮದಾಲಿ, ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ತಲಶ್ಶೇರಿ ಅತಿರೂಪತಾ ವಿಕಾರಿ ರೆ|ಫಾ|ಜೋಸೆಫ್ ಒಟ್ಟಪ್ಪಾಕಲ್, ಯುಡಿಎಫ್ ಜಿಲ್ಲಾ ಸಂಚಾಲಕ ಎ.ಗೋವಿಂದನ್ ನಾಯರ್, ಯುಡಿಎಫ್ ನೇತಾರರಾದ ಟಿ.ಇ.ಅಬ್ದುಲ್ಲ, ಎ.ಅಬ್ದುಲ್ ರಹಿಮಾನ್, ಹರೀಶ್ ಬಿ.ನಂಬ್ಯಾರ್, ಕರಿವೆಳ್ಳೂರು ವಿಜಯನ್, ಕುರ್ಯಾಕೋಸ್ ಪ್ಲಾಪರಂಬಿಲ್, ವಿ.ಕಮ್ಮಾರನ್, ಕೆಪಿಸಿಸಿ ಸದಸ್ಯರಾದ ಪಿ.ಎ.ಅಶ್ರಫಲಿ, ಕೆ.ವಿ.ಗಂಗಾಧರನ್ ಮಾತನಾಡಿದರು.

