ಪೆರ್ಲ:ಸ್ವರ್ಗದ ಬಾಡಿಗೆ ಕಟ್ಟಡದಲ್ಲಿ ನೂತನವಾಗಿ ಕಾರ್ಯಾರಂಭಿಸಲಿರುವ ಪಡ್ರೆ ಗ್ರಾಮ ಕಚೇರಿಯನ್ನು ಮಾರ್ಚ್ 15ರಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಲಿದ್ದು ಬುಧವಾರ ಸಂಜೆ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಸದಸ್ಯೆ ರೂಪವಾಣಿ ಆರ್. ಭಟ್, ಪಕ್ಷಗಳ ಮುಖಂಡರಾದ ಪಿ.ಎಸ್.ಕಡಂಬಳಿತ್ತಾಯ, ಬಿ.ಎಸ್.ಗಾಂಭೀರ, ಮಂಜೇಶ್ವರ ತಹಶಿಲ್ದಾರ್, ಪಿ.ಜೆ.ಆಂಟೋ, ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪುಟ್ಟಪ್ಪ ಕೆ., ಶಶಿಕಲಾ ವೈ., ಎಸ್.ವಿ.ಒ.ರಝಾಕ್ ಪಿ.ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭವನ್ನು ಯಶಸ್ವಿಗಾಗಿ ನೆರವೇರಿಸಲು ಸ್ವಾಗತ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಶಾರದಾ ವೈ, ಉಪಾಧ್ಯಕ್ಷರುಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಸದಸ್ಯರಾದ ಪುಟ್ಟಪ್ಪ ಕೆ., ರೂಪವಾಣಿ ಆರ್.ಭಟ್, ಶಶಿಕಲಾ ವೈ., ಸಂಚಾಲಕರಾಗಿ ಪಡ್ರೆ ಗ್ರಾಮಾಧಿಕಾರಿ ಅಬ್ದುಲ್ ಹಮೀದ್ ಪಿ., ಸದಸ್ಯರುಗಳಾಗಿ ಜಿ.ಪಂ.ಸದಸ್ಯೆ ಪುಷ್ಪಾ ಅಮೆಕ್ಕಳ, ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ, ಪಿ.ಎಸ್.ಕಡಂಬಳಿತ್ತಾಯ, ಕೆ.ಗಣಪತಿ ಭಟ್ ಪತ್ತಡ್ಕ, ರಾಮಕೃಷ್ಣ ರೈ ಕುದ್ವ, ಬಿ.ಎಸ್.ಗಾಂಭೀರ, ಹೃಷಿಕೇಶ ವಿ. ಎಸ್., ಶಶಿಭೂಷಣ್ ಶಾಸ್ತ್ರಿ, ನರಸಿಂಹ ಪೂಜಾರಿ, ಗೀತಾಕುಮಾರಿ, ಕೃಷ್ಣಕುಮಾರ್ ಆಯ್ಕೆಯಾದರು. ಕುಟುಂಬಶ್ರೀ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಚಂದ್ರಾವತಿ ಎಂ.ಸ್ವಾಗತಿಸಿ, ರವಿ ವಾಣೀನಗರ ವಂದಿಸಿದರು.


