ಕಾಸರಗೋಡು: ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಾಗಿ ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆ ಪ್ರಕಟಿಸಿರುವ "ರಾಜ್ಯ ಸರಕಾರದ ಆರ್ಥಿಕ ಸಹಾಯ ಯೋಜನೆಗಳು" ಎಂಬ ಸಮಗ್ರ ಕನ್ನಡ ಹೊತ್ತಗೆಯನ್ನು ರಾಜ್ಯ ಗ್ರಂಥಾಲಯ ಮಂಡಳಿಯ ಸದಸ್ಯತನ ಹೊಂದಿರುವ ಜಿಲ್ಲೆಯ ಕನ್ನಡ ಪ್ರದೇಶಗಳ ಗ್ರಂಥಾಲಯಗಳಿಗೆ ವಿತರಿಸಲಾಗುವುದು. ಈ ಬಗ್ಗೆ ಆಸಕ್ತರಾದ ಗ್ರಂಥಾಲಯಗಳ ಪದಾಧಿಕಾರಿಗಳು ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಮಧುಸೂದನನ್ ಎಂ. ಅವರನ್ನು ನೇರವಾಗಿ ಭೇಟಿಯಾಗಿ ಈ ಹೊತ್ತಗೆ ಪಡೆದುಕೊಳ್ಳಬೇಕು.
ಸರಕಾರದ ಎಲ್ಲ ಯೋಜನೆಗಳು ಈ ಮೂಲಕ ಒಮದೇ ಪುಸ್ತಕದಲ್ಲಿ ಜನತೆಗೆ ಸಿಗಲಿದೆ ಎಂಬುದೂ ಇಲ್ಲಿ ಗಮನಾರ್ಹ ವಿಚಾರ. ಸ್ಥಳೀಯಾಡಳಿತೆ ಸಂಸ್ಥೆಗಳ ಮೂಲಕ ವಿವಿಧ ಇಲಾಕೆಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಸಮಗ್ರ ಮಾಹಿತಿ, ಪ್ರತಿ ಯೋಜನೆಗಳ ಸಹಾಯ ಪಡೆಯುವ ಬಗೆ, ಅರ್ಜಿಯ ಸ್ವರೂಪ, ಕಳುಹಿಸಬೇಕಾದ ವಿಳಾಸ ಇತ್ಯಾದಿಗಳ ಮಾಹಿತಿ ಈ ಪುಸ್ತಕದಲ್ಲಿದೆ. ಗಂಭೀರ ಸ್ವರಪದ ರೋಗಿಗಳು, ವಯೋವೃದ್ಧರು, ಪರಿಶಿಷ್ಟ ಜಾತಿ-ಪಂಗಡದ ಮಂದಿ, ಇತರ ಹಿಂದುಳಿದ ಜನಾಂಗದವರು, ಮಕ್ಕಳು, ಬೇರೆ ರಾಜ್ಯಗಳ ಕಾರ್ಮಿಕರು, ಆನಿವಾಸಿಗಳು, ನಿವೃತ್ತ ಸೈನಿಕರು ಸಹಿತ ಎಲ್ಲ ಜನತೆಗೆ ಬೇಕಾದ ಸೌಲಭ್ಯಗಳ ವಿವರಗಳು ಈ ಹೊತ್ತಗೆಯಲಲಿದೆ. ವಿಶೇಷ ಪರಿಶೀಲನೆ ಅಗತ್ಯವರುವ ಜನತೆಗೆ ಸರಕಾರ ನೀಡುವ ಎಲ್ಲ ಸೌಲಭ್ಯಗಳಿಗೆ ಆದ್ಯತೆ ನೀಡಿ ರಾಜ್ಯ ಸರಕಾರ ರಚಿಸಿರುವ ಯೋಜನೆಗಳ ಸಮಗ್ರ ಮಾಹಿತಿಗಳು ಇಲ್ಲಿದ್ದು, ಸಾರ್ವಜನಿಕರ ಕೈಗೆಟಕಲಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂದೇಶ, ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಯು.ವಿ.ಜೋಸ್ ಅವರ ಪ್ರಸ್ತಾವನೆ ಇರುವ ಈ ಪುಸ್ತಕ ಗಡಿನಾಡಿನ ಜನತೆಗೆ ತುಂಬ ಸಹಕಾರಿಯಾಗಿದೆ. ಯೋಜನೆಗಳ ಹೆಸರು ಆಯಾ ಇಲಾಖೆಗಳ ವ್ಯಾಪ್ತಿಯಲ್ಲಿರುವುವು. ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯಾಡಳಿತೆ ಸಂಸ್ಥೆಗಳು, ವಾರ್ಡ್ ಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರ ಮೂಲಕ ಸಾರ್ವಜನಿಕರಿಗೆ ರಾಜ್ಯ ಸರಕಾರದ ಆರ್ಥಿಕ ಸಹಾಯ ಯೋಜನೆಗಳು ಎಂಬ ಪುಸ್ತಕ ವಾಚನಕ್ಕೆ ಅವಕಾಶಗಳಿವೆ.

