ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.23 ರಿಂದ ಆರಂಭಗೊಂಡ 17ನೇ ವರ್ಷದ ಅಖಂಡ ಭಜನಾ ಸಪ್ತಾಹ ಈಗಾಗಲೇ 4 ದಿನಗಳನ್ನು ಪೂರೈಸಿದ್ದು, ವಿವಿಧೆಡೆಗಳ ಅನೇಕ ಭಜನಾ ತಂಡಗಳು ಭಜನಾ ಸೇವೆ ಸಲ್ಲಿಸುತ್ತಿದ್ದಾರೆ. ಮಾ. 01 ರಂದು ಭಾನುವಾರ ಸೂರ್ಯಾಸ್ತಮಾನದ ಸಂದರ್ಭ ಭಜನಾ ಮಂಗಲಾಚರಣೆ ನಡೆಯಲಿದೆ. ಬಳಿಕ ಸವಿಜೀವನಂ ನೃತ್ಯ ಕಲಾಕ್ಷೇತ್ರ, ಕೊಂಡೆವೂರು ತಂಡದಿಂದ ಜಾನಪದ, ಶಾಸ್ತ್ರೀಯ ನೃತ್ಯ ಮತ್ತು ಶ್ರೀ ಕೃಷ್ಣಲೀಲಾಮೃತಂ ನೃತ್ಯರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಕೊಂಡೆವೂರಿನಲ್ಲಿ ರಿಂಗಣಿಸುತ್ತಿದೆ ಭಜನೆಯ ತಾಳ
0
ಫೆಬ್ರವರಿ 27, 2020