ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ 2020-21 ವಾರ್ಷಿಕ ಯೋಜನೆ ಚಟುವಟಿಕೆ ಸಮಿತಿ ಸಲಹೆ ನಿಟ್ಟಿನಲ್ಲಿ ಗ್ರಾಮಸಭೆ ಸೇರಲಾಯಿತು.
ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯನ್ನು ಮಾಜಿ ಶಾಸಕ ಸಿ.ಟಿ.ಅಹಮ್ಮದಾಲಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಕೊರೋನಾ ಸೋಂಕು ಪ್ರತಿರೋಧದ ಕುರಿತು ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಮನೋಜ್ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ನಂದಕುಮಾರ್ ವಾರ್ಷಿಕ ಸಮಿತಿಯ ಕರಡು ಶಿಫಾರಸುಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾ ಪಂಚಾಯತ್ ಅಯಕ್ಷ ಅಭಿಪ್ರಾಯಗಳ ಸಂಗ್ರಹ ನಡೆಸಿದರು. ಉಪಾಧ್ಯಕ್ಷೆ ಶಾಮತಮ್ಮಾ ಫಿಲಿಪ್, ಸ್ಥಾಯೀ ಸಮಿತಿ ಧ್ಯಕ್ಷರಾದ ಹರ್ಷಾದ್ ವರ್ಕಾಡಿ, ಪಾದೂರು ಷಾನವಾಝ್, ನ್ಯಾಯವಾದಿ ಪಿ.ಉಷಾ, ಸದಸ್ಯರಾದ ಎಂ.ನಾರಾಯಣನ್, ಮುಂತಾಝ್ ಝಮೀರಾ, ಜೋಸ್ ಪಾತಾಲಿನ್, ವಿವಿಧ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಎಂ.ರಾಜನ್, ಎಂ.ಗೌರಿ, ಎ.ಕೆ.ಎಂ.ಅಶ್ರಫ್, ಓಮನಾ ರಾಮಚಂದ್ರನ್, ಮಹಮ್ಮದಾಲಿ ಚಾಯಿಂಡಡಿ, ವಿವಿಧ ಗ್ರಾಮಪಂಚಾಯತ್ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.


