ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲ ಶ್ರೀಚೀರುಂಬಾ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಐದು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು.
ಗುರುವಾರ ಮಧ್ಯಾಹ್ನ 12ಕ್ಕೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆಯಿತು. ಸಂಜೆ 5.30ಕ್ಕೆ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ ಅವರಿಗೆ ಪೂರ್ಣಕುಂಭ ಸ್ವಾಗತ, 6ಕ್ಕೆ ಉಗ್ರಾಣ ಮಹೂರ್ತ, ಬಳಿಕ ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ದಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 8.30 ರಿಂದ ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅವರಿಂದ ಶ್ರೀಭಗವತೀ ಮಹಾತ್ಮ್ಯೆ ಹರಿಕಥಾ ಸತ್ಸಂಗ ನಡೆಯಿತು.
ಇಂದಿನ ಕಾರ್ಯಕ್ರಮ:
ಶುಕ್ರವಾರ ಬೆಳಿಗ್ಗೆ 8ರಿಂದ 48 ತೆಂಗಿನಕಾಯಿ ಗಣಪತಿಹೋಮ, ಬಳಿಕ 8 ರಿಂದ 9 ಗಂಟೆಯ ಮಧ್ಯೆ ಮೀನಲಗ್ನ ಸುಮುಹೂರ್ತದಲ್ಲಿ ಕಲಶ ಪ್ರತಿಷ್ಠೆ, ಮಧ್ಯಾಹ್ನ 12 ರಿಂದ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ರಿಂದ ಮಾಸ್ಟರ್ ಅಮಲ್ ರಾಜ್ ಪಿ.ಎಸ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಸಂಜೆ 4.30 ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಮೋಹನದಾಸ್ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಮಾಡುವರು. ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡವರ್ಮ ರಾಜ, ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ, ನ್ಯಾಯವಾದಿ ಬಿ.ಸುಬ್ಬಯ್ಯ ರೈ, ಮಂಜುನಾಥ ರೈ, ಚಂದ್ರಶೇಖರ ಕೆ., ಬಿ.ವಸಂತ ಪೈ ಬದಿಯಡ್ಕ, ಕರುಣಾಕರ ಅಡತ್ತಿಲ, ಕೆ.ವೇಣುಗೋಪಾಲ್, ಕ್ಷಿತಿ ಮಮ್ಲೂರು ಉಪಸ್ಥಿತರಿದ್ದು ಮಾತನಾಡುವರು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಬಿ.ಗೋಪಾಲ ಚೆಟ್ಟಿಯಾರ್, ಐತ್ತಪ್ಪ ಕುಲಾಲ್, ಗುಲಾಬಿ ಲಕ್ಷ್ಮಣ ಉಪಸ್ಥಿತರಿರುವರು. ನ್ಯಾಯವಾದಿ ಬಿ.ಶಂಕರ ದೇವಾಂಗ, ಕೆ.ರಾಮಚಂದ್ರ ತೊಕ್ಕೋಟು ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.
ಸಂಜೆ 5.30ರಿಂದ ಲಲಿತಾ ಸಹಸ್ರ ನಾಮಾರ್ಚನೆ, 6ಕ್ಕೆ ಹೊರೆಕಾಣಿಕೆ ಮೆರವಣಿಗೆ, 7 ರಿಂದ ಗಾನ ರಸಮಂಜರಿ, ರಾತ್ರಿ 8 ರಿಂದ ಪೂಜೆ, ಪ್ರಸಾದ ವಿತರಣೆ, ಅನ್ನಸಂರ್ತಣೆ ನಡೆಯಲಿದೆ.



