ಪೆರ್ಲ:ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ನೇತೃತ್ವದಲ್ಲಿ ಪಡ್ರೆ ಚಂದು ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ, ಸಂಸ್ಮರಣೆ, ನೂರರ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭ, ಮಕ್ಕಳ ಯಕ್ಷಗಾನ ಬಯಲಾಟ ಇಂದು ಹಾಗೂ ನಾಳೆ(29ರಂದು) ಜರಗಲಿದೆ.
ಇಂದು ಸಂಜೆ 6ಕ್ಕೆ ಪಡ್ರೆ ಚಂದು ಸಂಸ್ಮರಣೆ, ನೂರರ ನೆನಪು ಪ್ರಶಸ್ತಿ ಸಭಾ ಕಾರ್ಯಕ್ರಮ ನಡೆಯಲಿದೆ.ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಉದ್ಘಾಟಿಸುವರು. ಸಲಿದ್ದಾರೆ. ಪ್ರಗತಿಪರ ಕೃಷಿಕ ಪತ್ತಡ್ಕ ಗಣಪತಿ ಭಟ್ ಅಧ್ಯಕ್ಷತೆ ವಹಿಸುವರು.ಯಕ್ಷಗಾನ ಕಲಾವಿದ, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ, ರಾಜಾರಾಂ ಪೆರ್ಲ ಉಪಸ್ಥಿತರಿರುವರು.
ಭಾಗವತರಾದ ಹೊಸಮೂಲೆ ಗಣೇಶ ಭಟ್, ಡಾ.ಸತೀಶ್ ಪುಣಿಂಚತ್ತಾಯ, ಡಾ.ಸತ್ಯನಾರಾಯಣ ಪುಣಿಂಚತ್ತಾಯ, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ,ಹಿಮ್ಮೇಳ ವಾದಕ, ಯಕ್ಷರತ್ನ ರಾಘವ ಬಲ್ಲಾಳ್ ಕಾರಡ್ಕ ಅವರಿಗೆ 'ಪಡ್ರೆ ಚಂದು' ನೂರರ ನೆನಪು, ಅಭಿನಂದನೆ ಕಾರ್ಯಕ್ರಮ ನಡೆಯಲಿದೆ, ರಾತ್ರಿ 8ರಿಂದ ಚಿನ್ಮಯ ಕಲಾಕೇಂದ್ರ ಮೂಡಬಿದಿರೆ ವಿದ್ಯಾರ್ಥಿಗಳ 'ಬಬ್ರುವಾಹನ-ವೀರವರ್ಮ ಕಾಳಗ' 10.30ರಿಂದ ಕೇಂದ್ರದ ವಿದ್ಯಾರ್ಥಿಗಳ 'ಮದನಾಕ್ಷಿ ತಾರಾವಳಿ-ಗರುಡ ಗರ್ವಭಂಗ ಯಕ್ಷಗಾನ ಬಯಲಾತ ಪ್ರದರ್ಶನ ನಡೆಯಲಿದೆ.
ನಾಳೆ(ಫೆ.29ರಂದು) ಬೆಳಗ್ಗೆ 9ಕ್ಕೆ ಶ್ರೀ ಗಣಪತಿ ಹೋಮ, 10ಕ್ಕೆ ಸತ್ಯನಾರಾಯಣ ಪೂಜೆ, ಕೇಂದ್ರದ ವಿದ್ಯಾರ್ಥಿಗಳಿಂದ ಭಜನೆ, 11ಕ್ಕೆ ಹಿಮ್ಮೇಳ ಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ಶಿಷವೃಂದದ 'ಗಾನ ವೈಭವ' ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 4ರಿಂದ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ ಪಡ್ರೆ ಚಂದು ಸಂಸ್ಮರಣೆ, ವಿಚಾರ ಸಂಕಿರಣ ನಡೆಯಲಿದ್ದು ಹಿರಿಯ ಯಕ್ಷಗಾನ ಕಲಾವಿದ, ಪ್ರಸಿದ್ಧ ಅರ್ಥದಾರಿ, ಅಶೋಕ್ ಭಟ್ ಉಜಿರೆ ಉದ್ಘಾಟಿಸುವರು. ನಿವೃತ್ತ ಶಿಕ್ಷಕ ಯಕ್ಷಗಾನ ಕಲಾವಿದ ಎಸ್.ಬಿ.ನರೇಂದ್ರ ಕುಮಾರ್ ಧರ್ಮಸ್ಥಳ ಅಧ್ಯಕ್ಷತೆ ವಹಿಸುವರು.'ಯಕ್ಷಗಾನ ಕಲಾವಿದರಾಗಿ ಪಡ್ರೆ ಚಂದು', 'ಯಕ್ಷಗಾನ ಗುರುಗಳಾಗಿ ಪಡ್ರೆ ಚಂದು', ಮೇಳದ ಪ್ರಬಂಧಕರಾಗಿ ಪಡ್ರೆ ಚಂದು, ವಿಚಾರ ಸಂಕಿರಣ ನಡೆಯಲಿದ್ದು ಹಿರಿಯ ಕಲಾವಿದ, ಅರ್ಥದಾರಿ ಕೋಟೆ ರಾಮಭಟ್, ಉಮೇಶ ಶೆಟ್ಟಿ ಉಬರಡ್ಕ, ಸುಣ್ಣಂಬಳ ವಿಶ್ವೇಶ್ವರ ಭಟ್ ವಿವರಣೆ ನೀಡುವರು.ಪ್ರಸಿದ್ಧ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಯೋಗೀಶ್ ರಾವ್ ಚಿಗುರುಪಾದೆ, ಆರತಿ ಪಟ್ರಮೆ, ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಭಟ್ ಉಪಸ್ಥಿತರಿರುವರು.ಸಂಜೆ 6.30ಕ್ಕೆ ಪಡ್ರೆ ಚಂದು ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ, ಭಾವಚಿತ್ರ ಅನಾವರಣ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಎಂ.ವಿ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ ಆಶೀರ್ವಚನ ನೀಡುವರು.ಖ್ಯಾತ ಯಕ್ಷಗಾನ ಕಲಾವಿದ, ಕಟೀಲು ಮೇಳ ವ್ಯವಸ್ಥಾಪಕ ಸುಣ್ಣಂಬಳ ವಿಶ್ವೇಶ್ವರ ಭಟ್, ಚಂದ್ರಶೇಖರ ದಾಮ್ಲೆ, ಡಾ.ಮೋಹನದಾಸ ರೈ ಬಳ್ಳೂರು, ಆದರ್ಶ ಚೊಕ್ಕಾಡಿ, ಎಸ್.ನಿತ್ಯಾನಂದ ಪಡ್ರೆ, ರವಿ ಅಲೆವೂರಾಯ, ಯಂ.ನಾ.ಚೆಂಬಲ್ತಿಮಾರ್ ಉಪಸ್ಥಿತರಿರುವರು.ವಿವೇಕಾನಂದ ಕಾಲೇಜು ಉಪನ್ಯಾಸಕ ವಿ.ಜಿ.ಭಟ್ 'ಪಡ್ರೆ ಚಂದು' ಭಾವಚಿತ್ರ ಅನಾವರಣ ಗೊಳಿಸುವರು.ನಿವೃತ್ತ ಮುಖ್ಯ ಶಿಕ್ಷಕ ಚೇವಾರು ಶಂಕರ ಕಾಮತ್ ಹಿರಿಯ ಮದ್ದಳೆಗಾರ ರಾಮಕೃಷ್ಣ ಕಾಮತ್ ಅವರ ಭಾವಚಿತ್ರ ಅನಾವರಣ ಗೊಳಿಸುವರು.
ಆಟ-ಕೂಟಗಳ ಮಾತಿನ ಚತುರ, ಸುಪ್ರಸಿದ್ಧ ಕಲಾವಿದ ಕುಂಬಳೆ ಸುಂದರರಾವ್ ಅವರಿಗೆ ಪಡ್ರೆ ಚಂದು ಶತಮಾನೋತ್ಸವ ಪ್ರಶಸ್ತಿ, ಪಡ್ರೆ ಚಂದು ಅವರ ಶಿಷ್ಯ, ಬಣ್ಣದ ವೇಷಗಳ ಬಿನ್ನಾಣಗಾರ, ಹನುಮಗಿರಿ ಮೇಳದ ಖ್ಯಾತ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ವಷರ್ಂಪ್ರತಿ ನೀಡಲಾಗುವ ಪಡ್ರೆ ಚಂದು ಪ್ರಶಸ್ತಿ, ಪಡ್ರೆ ಚಂದು ಅವರ ಪ್ರಥಮ ಪುತ್ರ, ಕಟೀಲು ಮೇಳದ ಹಿರಿಯ ಕಲಾವಿದ ಪಡ್ರೆ ಕುಮಾರ ಅವರಿಗೆ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ವತಿಯಿಂದ ನೀಡಲಾಗುವ 'ಅಡ್ಕಸ್ಥಳ ಪ್ರಶಸ್ತಿ', ತೆಂಕುತಿಟ್ಟಿನ ಸೃಜನಶೀಲ ಹಾಸ್ಯಗಾರ, ಪ್ರಸ್ತುತ ಕಟೀಲು ಮೇಳದಲ್ಲಿರುವ ಗಡಿನಾಡು ಕಾಸರಗೋಡಿನ ಅಭಿಜಾತ ಪ್ರತಿಭೆ, ಖ್ಯಾತ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರಿಗೆ ಪಡ್ರೆ ಚಂದು ಜನ್ಮ ಶತಮಾನೋತ್ಸವ ಅಭಿನಂದನಾ ಸನ್ಮಾನ, ನಿವೃತ್ತ ಶಿಕ್ಷಕ, ಮದ್ದಳೆಗಾರ ಪದ್ಮನಾಭ ರಾವ್ ಅವರಿಗೆ ಗುರುವಂದನೆ, ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರಿಗೆ ವಿಶೇಷ ಪ್ರಶಸ್ತಿ, ಪ್ರಸಾದನ ಕಲಾವಿದ ನಾರಾಯಣ ಸಜಂಕಿಲ ಅವರಿಗೆ ಇದೇ ಮೊದಲ ಬಾರಿ ನೀಡಲಾಗುವ 'ದೇವಕಾನಶ್ರೀಕೃಷ್ಣ ಭಟ್ ಪ್ರಶಸ್ತಿ', ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರಿಗೆ ಪುರೋಹಿತ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.ಬಣ್ಣದ ವೇಷಧಾರಿ ರಾಧಾಕೃಷ್ಣ ಮಾಸ್ತರ್ ಪೈವಳಿಕೆ ದೇವಕಾನರ ಸಂಸ್ಮರಣಾ ಭಾಷಣ ಮಾಡುವರು. ಗೋಪಾಲಕೃಷ್ಣ ಕಾನ, ಶ್ರೀಕೃಷ್ಣ ದೇವಕಾನ ಉಪಸ್ಥಿತರಿರುವರು. ರಾತ್ರಿ 8.30ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ರಂಗಪ್ರವೇಶದ ವಿದ್ಯಾರ್ಥಿಗಳಿಂದ 'ಪಾಂಡವಾಶ್ವಮೇಧ' 12.30ಕ್ಕೆ 'ಬಿಲ್ಲ ಹಬ್ಬ', 2ರಿಂದ 'ಕುಶ-ಲವ', 4ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ 'ಗಿರಿಜಾ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.


