HEALTH TIPS

ವರ್ಕಾಡಿಯಲ್ಲಿ ವೆಲಂಕಣಿ ಮಹೋತ್ಸವ


      ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ 1910ರಲ್ಲಿ ಸ್ಥಾಪಿಸಲ್ಪಟ್ಟ, ಯೇಸುಕ್ರಿಸ್ರರ ತಿರುಹೃದಯಕ್ಕೆ ಸಮರ್ಪಿಸಲಾದ ವರ್ಕಾಡಿ ದೇವಾಲಯದಲ್ಲಿ ಆರೋಗ್ಯ ಮಾತೆ (ವೆಲಂಕಣಿ) ಪುಣ್ಯ ಕ್ಷೇತ್ರದ 29ನೇ ವರ್ಷದ ವಾರ್ಷಿಕ ಮಹೋತ್ಸವವು ವಿಜೃಂಭಣೆಯಿಂದ ಜರಗಿತು. ಸುಮಾರು 3000 ದಷ್ಟು ಭಕ್ತಾದಿಗಳು ಈ ಮಹೋತ್ಸವದಲ್ಲಿ ಭಾಗಿಯಾದರು.
    ದಾನಿಗಳಿಗೆ ಮೊಂಬತ್ತಿ ವಿತರಣೆಯ ನಮನದೊಂದಿಗೆ ಮಹೋತ್ಸವ ಆರಂಭವಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಶ್ರೇಷ್ಠ ಗುರುವಂದನೀಯ ಮೊನ್ಸಿಝೊರ್ ಡೆನಿಸ್ ಪ್ರಭು ಹಾಗೂ ಈ ಹಿಂದೆ ವರ್ಕಾಡಿಯಲ್ಲಿ ಧರ್ಮಗುರುಗಳಾಗಿದ್ದ ವಂದನೀಯ ಸ್ವಾಮಿ ಪೀಟರ್ ಸೆರಾವೊರವರು ದಾನಿಗಳಿಗೆ ಮೊಂಬತ್ತಿವಿತರಿಸಿದರು.
       ಆ ಬಳಿಕ ನಡೆದ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಕಾಥೋಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳಾದ ವಂದನೀಯ ಸ್ವಾಮಿ ಆ್ಯಂಟನಿ ಮೈಕಲ್ ಶೆರಾ ಅವರು ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಆರ್ಪಿಸಿ `ಮನುಷ್ಯ ಜೀವಕ್ಕೆ ಗೌರವ ನೀಡುವುದಕ್ಕೆ ಮೇರಿ ಮಾತೆ ಪ್ರೇರಣೆ' ಎಂಬ ಸಂದೇಶದ ಮೇಲೆ ವಿಶೇಷ ಪ್ರವಚನಗೈದರು. ವಿವಿಧ ಧರ್ಮ ಕೇಂದ್ರಗಳಿಂದ ಬಂದಿದ್ದ ಹದಿನಾಲ್ಕು ಧರ್ಮಗುರುಗಳು ಪ್ರತ್ಯೇಕ ಪ್ರಾರ್ಥನೆಯೊಂದಿಗೆ ರೋಗಿಗಳಿಗೆ ಆಶೀರ್ವಾದವನ್ನು ನೀಡಿದರು. ಸ್ಥಳೀಯ ಧರ್ಮಗುರುಗಳು ಭಕ್ತಾದಿಗಳು ವೆಲ್ಲಂಕಣಿ ಮಾತೆಗೆ ಆರ್ಪಿಸಿದ ಸ್ತುತಿ, ಆಶೋತ್ತರಗಳು ಹಾಗೂ ಪ್ರಾರ್ಥನೆಗಳನ್ನು ಘೋಷಿಸಿದರು. ಪೂಜಾ„ಗಳ ಮುಕ್ತಾಯದ ನಂತರ ನೆರೆದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಯಿತು.
      ಈ ಪ್ರಯುಕ್ತ ವರ್ಕಾಡಿ ಚರ್ಚ್ ವಠಾರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವು ಜರಗಿತು. ಶಾಲಾ ವಿಧ್ಯಾರ್ಥಿಗಳು ಹಾಗು ವಿವಿಧ ಹವ್ಯಾಸಿ ಸ್ಥಳೀಯ ಪಂಗಡಗಳಿಂದ ವಿವಿಧ ವಿನೋದಾವಳಿಗಳು ಪ್ರಸ್ತುತಿಗೊಂಡವು. ಮಜಾ ಭಾರತ ಖ್ಯಾತಿಯ ವೃತ್ತಿಪರ ಕಲಾ ತಂಡ `ಮಸ್ಕಿರಿ ಕುಡ್ಲ' ಅವರಿಂದ ಎರಡು ಗಂಟೆಗಳ ನಿರಂತರ `ತೆಲಿಕೆ ಬಂಜಿ ನಿಲಿಕೆ' ಹಾಸ್ಯ ಕಾರ್ಯಕ್ರಮ ನಡೆಯಿತು. 'ವರ್ಕಾಡಿ ಪ್ರೀಮಿಯರ್ ಲೀಗ್' ಕ್ರಿಕೆಟ್ ಸರ್ಧೆಯ ವಿಜೇತರನ್ನು ಟ್ರೋಪಿಗಳ ಹಸ್ತಾಂತರದೊಂದಿಗೆ ಸಮ್ಮಾನಿಸಲಾಯಿತು. ನಿರ್ಮಾಣಗೊಳ್ಳುತ್ತಿರುವ ಹೊಸ ವರ್ಕಾಡಿ ದೇವಾಲಯದ ಯೋಜನೆಗೆ ಸಹಾಯವಾಗಿ ಹಮ್ಮಿಕೊಂಡ `ಲಕ್ಕಿ ಕೂಪನ್' ವಿಜೇತರನ್ನು ಹಾಜರಿದ್ದ ವಿವಿಧ ಅತಿಥಿಗಳು ಆರಿಸಿದರು. ಲವೀನ ಮೊಂತೇರೊ ಹಾಗೂ ಕು|ಸೂಶ್ಮ ಡಿ'ಸೋಜಾ ಅವರು ಕಾರ್ಯಕ್ರಮ ನಿರೂಪಿಸಿದರು.
       ವಂದನೀಯ ಸ್ವಾಮಿ ಲೊರೆನ್ಸ್ ಮಾರ್ಟಿಸ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಈ ಪುಣ್ಯಕ್ಷೇತ್ರವನ್ನು 1992 ಮಾರ್ಚ್ 1 ರಂದು ಆರಂಭಿಸಲಾಗಿತ್ತು. ವೆಲಂಕಣಿಯಿಂದಲೇ ತರಿಸಿದ ಮಾತೆಯ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ತಂದು ಚರ್ಚ್‍ನಲ್ಲಿ ಸ್ಥಾಪಿಸಲಾಗಿತ್ತು. ಅಂದಿನಿಂದ ಇಂದಿನ ವರೆಗೆ ಪ್ರತಿ ಶನಿವಾರ ಬಲಿ ಪೂಜೆಯೊಂದಿಗೆ ಜಪಸರ ಪ್ರಾಥòನೆ ನಡೆಯುತ್ತಾ ಬಂದಿದೆ. ವರ್ಕಾಡಿ ಜನತೆಯ ಮಾತ್ರವಲ್ಲ ಊರ ಪರವೂರ ಭಕ್ತಾದಿಗಳೆಲ್ಲರ ಮೇಲೆ ಅವರ ಸಹಾಯ ಹಸ್ತ ಹಾಗೂ ಕೃಪಾಕಟಾಕ್ಷವು ನಿರಂತರವಾಗಿದ್ದು, ತಾಯಿಯಾಗಿ ನಮ್ಮೆಲ್ಲರನ್ನು ಅಂದಿನಿಂದ ಇಂದಿನವರಗೆ ಕಾಪಾಡಿ ಸಲಹಿದ್ದಾರೆ. ಈ ವರ್ಷದ ವೆಲ್ಲಂಕಣಿ ಮಹೋತ್ಸವಕ್ಕೆ ವಂದನೀಯ ಸ್ವಾಮಿ ಲೊರೆನ್ಸ್ ಮಾರ್ಟಿಸ್‍ಹಾಜರಿದ್ದು ಅವರೇ ಹಬ್ಬದ ಬಲಿಪೂಜೆಯ ನಂತರ ವೆಲಂಕಣಿ ಮಾತೆಯ ನವೇನಾ ಪ್ರಾರ್ಥನೆಯನ್ನು ನೆರವೇರಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries