HEALTH TIPS

ಮಧೂರು ಜಿ.ಜೆ.ಬಿ.ಎಸ್.ನಲ್ಲಿ ಕಲಿಕೋತ್ಸವ


       ಮಧೂರು: ಮಧೂರು ಪಂಚಾಯತಿ ಮಟ್ಟದ ಕಲಿಕೋತ್ಸವ ಮಧೂರಿನ ಜಿ.ಜೆ.ಬಿ.ಎಸ್.ಶಾಲೆಯಲ್ಲಿ  ನಡೆಯಿತು.
        ಮಧೂರು ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ  ಪುಷ್ಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯ ಹಿರಿಮೆಯ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಕಲಿಕೋತ್ಸವದ ಪ್ರಾಧಾನ್ಯವನ್ನು ತಿಳಿಸಿದರು. ಬ್ಲಾಕ್ ನಿರೂಪಣಾಧಿಕಾರಿ  ಕಾಸಿಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ವರಿ ಹೊಳ್ಳ, ಮಾತೃಸಂಘದ ಅಧ್ಯಕ್ಷೆ ಪ್ರಸನ್ನ, ಶಾಲೆಯ ಹಿರಿಯ ಅಧ್ಯಾಪಿಕೆ ಲೀಲಾವತಿ ಟೀಚರ್, ಗ್ರಾ.ಪಂ.ಸದಸ್ಯೆ ಮೈಮೂನಾ ಅಬ್ಬಾಸ್ ಮೊದಲಾದವರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಸ್ವಾಗತಿಸಿ, ಜಯಲಕ್ಷ್ಮೀ ಟೀಚರ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳು ತಾವು ಆರ್ಜಿಸಿದ ಕಲಿಕಾ ಸಾಧನೆಗಳನ್ನು ಪ್ರದರ್ಶಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries