ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಗಳ ಸಮಗ್ರ ಪರಂಪರೆಯನ್ನು ಪ್ರತಿಬಿಂಬಿಸುವ, ಭಾಷಾ ಸೌಹಾರ್ಧತೆ, ಕನ್ನಡ ಅಸ್ಮಿತೆಯ ಪ್ರತೀಕವಾಗಿ ಅಭೂತಪೂರ್ವ ಕಾರ್ಯಯೋಜನೆಗಳ ಮೂಲಕ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಏಪ್ರಿಲ್ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಕನ್ನಡ ಸಿರಿ ಸಮ್ಮೇಳನದ ಸಮಗ್ರ ಮಾಹಿತಿಗಳನ್ನು ನೀಡಿ ಸಮಾರಂಭಕ್ಕೆ ಆಗಮಿಸುವಂತೆ ಜಿಲ್ಲೆಗೆ ಗುರುವಾರ ಭೇಟಿನೀಡಿದ ಕೇಂದ್ರ ಸಚಿವ ವಿ.ಮುರಳೀಧರನ್ ಅವರಿಗೆ ಸಂಘಟಕರು ಆಹ್ವಾನ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವ ವಿ.ಮುರಳೀಧರನ್ ಅವರು, ತಾನು ಹಲವಾರು ವರ್ಷಗಳಿಂದ ಕಾಸರಗೋಡಿನ ನಿಕಟ ಸಂಪರ್ಕದಲ್ಲಿದ್ದು, ಇಲ್ಲಿಯ ಬಹುಭಾಷಾ ನೆಲೆಗಟ್ಟು, ಸೌಹಾರ್ಧತೆ ಆಕರ್ಷಿಸಿದೆ. ಮೂಲ ಸಂಸ್ಕøತಿಯಾದ ತುಳು-ಕನ್ನಡ ಪರಂಪರೆಯ ಬಗ್ಗೆ ಅಭಿಮಾನವುಳ್ಳವನಾಗಿದ್ದು, ನಿಯೋಜಿತ ಕಾರ್ಯಕ್ರಮ ಯಶಸ್ವಿಯಾಗಲಿ. ಸಂಸ್ಕøತಿಯ ಬೇರುಗಳನ್ನು ಗಟ್ಟಿಗೊಳಿಸುವ ಇಂತಹ ಪ್ರಯತ್ನಗಳು ಶ್ಲಾಘನೀಯ ಎಂದು ಅವರು ತಿಳಿಸಿದರು.
ಕನ್ನಡ ಸಿರಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸಂಜೀವ ಶೆಟ್ಟಿ ಮೊಟ್ಟಕುಂಜ ಮೊದಲಾದವರು ಉಪಸ್ಥಿತರಿದ್ದರು.


