ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಖಚಿತಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊನೆಯ ರೋಗಿಯೂ ಭಾನುವಾರ ಸಂಜೆ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ವ್ಯಕ್ತಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಕಾಸರಗೋಡು ಶೇ 100 ಕೋವಿಡ್ ಮುಕ್ತ ಜಿಲ್ಲೆಯಾಗಿದೆ. 178 ಮಂದಿ ಮಂದಿಗೆ ಸೋಂಕು ಖಚಿತವಾಗಿದ್ದು, ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದು ಜಿಲ್ಲೆಗೆ ಅಭೂತಪೂರ್ವ ಹಿರಿಮೆ ತಂದಿದೆ.
178ರಿಂದ ಸೊನ್ನೆ ವರೆಗೆ:
178 ರಿಂದ ಸೊನ್ನೆ ವರೆಗಿನ ಈ ಜೈತ್ರಯಾತ್ರೆ ಜಿಲ್ಲೆಯ ಮಟ್ಟಿಗೆ ಸಣ್ಣ ವಿಚಾರವೇನೂ ಆಗಿರಲಿಲ್ಲ. ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಪ್ರತಿರೋಧ ಚಟುವಟಿಕೆಗಳ ಎರಡನೇ ಹಂತ ಆರಂಭಿಸಿದ ವೇಳೆ ಜಿಲ್ಲೆ ತಲ್ಲಣಗೊಂಡ ಸ್ಥಿತಿಯಲ್ಲಿತ್ತು. ಸಾಮಾಜಿಕ ಹರಡುವಿಕೆಯ ಸಾಧ್ಯತೆಗಳ ಭೀತಿ ಎಲ್ಲೆಡೆ ಕಂಡುಬರುತ್ತಿತ್ತು. ಆದರೆ ಏಕಮನಸ್ಸಿನ ಎಲ್ಲ ವಲಯಗಳ ಸಹಕಾರದೊಂದಿಗೆ ಜನಜಾಗೃತಿಯ ಬೆಂಬಲದೊಂದಿಗೆ ನಡೆಸಿದ ಪ್ರತಿರೋಧ ಚಟುವಟಿಕೆಗಳು ಇಂದು ಅಭಿಮಾನಕರ ಸಾಧನೆಯತ್ತ ಜಿಲ್ಲೆಯನ್ನು ತಂದಿರಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಜಿಲ್ಲಾಡಳಿತೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ ನಡೆಸಿದ ನೇತೃತ್ವಕ್ಕೆ , ಸ್ಥಳೀಯಾಡಳಿತ ಸಂಸ್ಥೆಗಳು, ಕುಟುಂಬಶ್ರೀ, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಅಗ್ನಿಶಾಮಕದಳ ಸಹಿತ ವಿಭಾಗಗಳು ಹಗಲು-ರಾತ್ರಿ ನಡೆಸುತ್ತಿರುವ ಯತ್ನ ಫಲ ನೀಡಿದೆ.
ಐತಿಹಾಸಿಕ ಸಾಧನೆ:
ಎಲ್ಲ ಮಜಲುಗಳಲ್ಲಿ ನೋಡಿದಾಗಲೂ ಇದು ಐತಿಹಾಸಿಕ ವಿಜಯವಾಗಿರುವುದು ಖಚಿತಗೊಳ್ಳುತ್ತದೆ. ರಾಜ್ಯ ಸರಕಾರ-ಆರೋಗ್ಯ ಇಲಾಖೆ ತಿಳಿಸಿದ ಕಟ್ಟುನಿಟ್ಟುಗಳನ್ನು ನಾಡು ಅಕ್ಷರಶಃ ಪಾಲಿಸಿದೆ. ಲಾಕ್ ಡೌನ್ ಆದೇಶವನ್ನು ಪಾಲಿಸುವ ಮೂಲಕ, ಅನಿವಾರ್ಯ ಕಾರಣಗಲ್ಲದೆ ಮನೆಗಳಿಂದ ಹೊರಗಿಳಿಯದೇ, ಮಾಸ್ಕ ಧರಿಸಿ, ಆಗಿದಾಂಗ್ಗೆ ಕೈತೊಳೆಯುತ್ತಾ, ಸಾಮಾಜಿಕ ಅಂತರ ಪಾಲಿಸಿ, "ಬ್ರೇ ದಿ ಚೈನ್' ಸಂದೇಶವನ್ನು ಪಾಲಿಸಿರುವುದು ರಾಜ್ಯದ ಜನಜಾಗೃತಿಯನ್ನು ಸಾಬೀತುಪಡಿಸುತ್ತದೆ.
ಇಷ್ಟೆಲ್ಲ ಸಾಧನೆಗಳಿದ್ದರೂ, ಜಾಗೃತಿ ಸಡಿಲಗೊಳಿಸುವ ಸಮಯ ಇನ್ನು ಬಂದಿಲ್ಲ. ಈ ಕ್ಷಣದ ವರೆಗೆ ಜಿಲ್ಲೆ ರೋಗಮುಕ್ತವಾಗಿದೆ ಎಂದು ಹೇಳಬಹುದಾದರೂ, ನಾಳೆ ಮತ್ತೆ ಕಾಣಿಸಿಕೊಳ್ಳದು ಎಂಬ ಬಗ್ಗೆ ದೃಡತೆ ಇಲ್ಲ. ಒಂದು ಚಿಕ್ಕ ಅಸಡ್ಡೆಯೂ ಗಂಭೀರ ದುರಂತಕ್ಕೆ ಕದ ತೆರೆಯಲಿದೆ ಎಂಬ ಸೂಕ್ಷ್ಮವನ್ನು ಅನುಭವದಿಂದಲೇ ನಾವು ಈಗಾಗಲೇ ಕಂಡವರು. ಹಾಗಾಗಿ ಈಗ ನಡೆಸಲಾಗುತ್ತಿರುವ ಹೋರಾಟದಲ್ಲಿ ಜಾಗರೂಕತೆಯ ಆಯುಧವನ್ನು ಕೆಳಗಿರಿಸುವ ದಿನ ಇನ್ನೂ ಬಂದಿಲ್ಲ ಎಂಬುದನ್ನು ಮನಗಂಡು ಮುಂದುವರಿಯಬೇಕಿದೆ.

